ವಾಶ್ ರೂಂ ಬಳಕೆ ಮಾಡಿದರೆ ಸಹಜವಾಗಿ ಎಷ್ಟು ದುಡ್ಡು ಕೊಡಬಹುದು. ಅಬ್ಬಬ್ಬಾ ಅಂದ್ರೆ 10 ರೂ. ನಿಂದ 20 ರೂಪಾಯಿ. ಆದರೆ, ಇಲ್ಲೊಂದು ವಿಷಯ ವೈರಲ್ ಆಗಿದ್ದು, ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ರಾಜಸ್ಥಾನದ ಮಹಿಳೆಯೊಬ್ಬರು ಈ ಪ್ರಶ್ನೆ ಹುಟ್ಟು ಹಾಕಿದ್ದಾರೆ. ಇತ್ತೀಚೆಗಷ್ಟೇ ಅವರು ಖಾಟು ಶ್ಯಾಮ್ ಮಂದಿರಕ್ಕೆ ಭೇಟಿ ನೀಡಿದಾಗ ಈ ಕಹಿ ಘಟನೆ ನಡೆದಿದೆ ಎನ್ನಲಾಗಿದೆ. ವೃದ್ಧ ತಾಯಿಯ ಹೆಬ್ಬಯಕೆ ಈಡೇರಿಸಲೆಂದೇ ಪುತ್ರಿ ದೇಗುಲಕ್ಕೆ ಕರೆದುಕೊಂಡು ಹೋಗಿದ್ದರು. ಅಮ್ಮನ ಆಸೆಯಂತೆ ಸರದಿ ಸಾಲಿನಲ್ಲೇ ನಿಂತು ದೇವರ ದರ್ಶನ ಕೂಡಾ ಪಡೆದಿದ್ದರು.
ಆದರೆ, ವೃದ್ಧ ತಾಯಿಗೆ ಸರದಿ ಸಾಲಲ್ಲಿ ನಿಂತು ಹೊಟ್ಟೆ ನೋವು ಉಲ್ಬಣಿಸಿದೆ. ವಾಂತಿ ಬಂದಂತೆ ಆಗಿದೆ. ಹೀಗಾಗಿ ಹತ್ತಿರದಲ್ಲೇ ವಾಶ್ ರೂಂಗೆ ಅಂತಾ ಆ ಕುಟುಂಬ ಹುಡುಕಾಡಿದೆ. ಆದರೆ ಸುತ್ತಲೂ 7 ಕಿ.ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಲಾಡ್ಜಿಂಗ್ ಇಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ಅಲ್ಲೇ ಇದ್ದ ಪುಟ್ಟ ಹೋಟೆಲ್ ನಲ್ಲಿ ಈ ಬಗ್ಗೆ ವಿಚಾರಿಸಿದ್ದಕ್ಕೆ ವಾಶ್ ರೂಂ ಬಳಕೆಗೆ ಕೊಡ್ತೀವಿ 805 ರೂಪಾಯಿ ಕೊಡಬೇಕು ಅಂದಿದ್ದಾನೆ. ವಿಧಿಯಿಲ್ಲದೆ ಆ ಕುಟುಂಬ 805 ರೂಪಾಯಿ ನೀಡಿ ವೃದ್ಧ ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದೆ. ಆದರೆ, ಕೇವಲ 6 ನಿಮಿಷಗಳ ಕಾಲ ವಾಶ್ ರೂಂ ಬಳಸಿದ್ದಕ್ಕೆ 805 ರೂಪಾಯಿ ಪಾವತಿಸಬೇಕಾದ ಅನಿವಾರ್ಯತೆ ಬಂದೊದಗಿದ್ದು,ನಿಜ ಅಂತಾ ಆ ಮಹಿಳೆ ಬರೆದುಕೊಂಡಿದ್ದಾರೆ.