ನವದೆಹಲಿ: ಆಪರೇಷನ್ ಸಿಂಧೂರ್ ಕಾರ್ಯಾಚರಣೆಯಲ್ಲಿ ಬರೋಬ್ಬರಿ 100ಕ್ಕೂ ಅಧಿಕ ಉಗ್ರರನ್ನು ಬಲಿ ತೆಗೆದುಕೊಳ್ಳಲಾಗಿದೆ ಎಂದು ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್(DGMO Rajiv Ghai) ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 7ರಂದು ನಡೆಸಿದ್ದ ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ವೇಳೆ 9 ಸ್ಥಳಗಳ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ 100ಕ್ಕೂ ಅಧಿಕ ಉಗ್ರರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಈ ವೇಳೆ ಪಾಕಿಸ್ತಾನದಲ್ಲಿನ ಉಗ್ರ ನೆಲೆಗಳನ್ನು ನಾಶ ಮಾಡಿರುವ ಕುರಿತು ಸಾಕ್ಷ್ಯಗಳನ್ನೂ ಬಹಿರಂಗಪಡಿಸಲಾಯಿತು. ಲಷ್ಕರೆ ತೈಯಬಾದ ಮುದಾಸಿರ್, ಜೈಷೆ ಸಂಘಟನೆಯ ಉಗ್ರ ಹಫೀಜ್ ಮೊಹಮ್ಮದ್, ಬಹಾವಲ್ಪುರದ ಮರ್ಕಜ್ ಸಭಾನಲ್ಲಾದ ಉಸ್ತುವಾರಿ ಜಮೀಲ್, ಲಷ್ಕರೆ ತೈಬಾ ಉಗ್ರ ಖಾಲಿದ್ ಸೇರಿದಂತೆ ಹಲವರು ಕಾರ್ಯಚರಣೆಯಲ್ಲಿ ಹತರಾಗಿದ್ದಾರೆ ಎಂದು ಹೇಳಿದ್ದಾರೆ.