ಬೆಂಗಳೂರು: ನಗರದಲ್ಲಿ ವಾಯು ಮಾಲಿನ್ಯ ಪ್ರಮಾಣ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundurao )ಪತ್ರ ಬರೆದಿದ್ದಾರೆ.
ನಗರದಲ್ಲಿ ವಾಯುಮಾಲಿನ್ಯ ಹೆಚ್ಚಳವಾಗುತ್ತಿದೆ. ಹೀಗಾಗಿ ಸಾರಿಗೆ ಇಲಾಖೆಯಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳಿ. ಈಗ ಚಾಲ್ತಿಯಲ್ಲಿರುವ ಬಸ್ ಗಳನ್ನು ಬದಲಿಸಿಕೊಂಡು ಕೇವಲ ಇವಿ ಬಸ್ ಗಳನ್ನು(bus) ಮಾತ್ರ ಬಳಸಿ ಎಂದು ಪತ್ರದಲ್ಲಿ ಮನವಿ ಮಾಡಲಾಗಿದೆ.
ತೀವ್ರ ವಾಯು ಮಾಲಿನ್ಯದಿಂದಾಗಿ ಜನರ(people) ಆರೋಗ್ಯ(health) ಸಮಸ್ಯೆ ಹೆಚ್ಚಳವಾಗುತ್ತಿವೆ. ವಾಹನ ದಟ್ಟಣೆ ಹೆಚ್ಚಾಗುತ್ತಿರುವುದರಿಂದಾಗಿ ಬೆಂಗಳೂರು ವಾಯು ಮಾಲಿನ್ಯದ(air pollution) ವಿಚಾರದಲ್ಲಿ ಕುಖ್ಯಾತಿ ಪಡೆದಿದೆ. ಹೀಗಾಗಿ ಇದನ್ನು ತಡೆಗಟ್ಟಲು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚು ಇವಿ ವಾಹನಗಳನ್ನು ಪ್ರೋತ್ಸಾಹಿಸಿ, ಇಂಧನ ಬಳಕೆ ವಾಹನಗಳನ್ನ ಕಡಿಮೆ ಬಳಸಿ ಎಂದು ದಿನೇಶ್ ಗುಂಡೂರಾವ್ ಮನವಿ ಮಾಡಿದ್ದಾರೆ.