ಶಿವಮೊಗ್ಗ: ಧರ್ಮಸ್ಥಳ ಕರ್ನಾಟಕದಲ್ಲಿ ಒಂದು ರೀತಿಯ ಕಾಶಿಯ ರೀತಿಯ ಪ್ರಸಿದ್ಧ ಸ್ಥಳ. ಇಂದು ಧರ್ಮಸ್ಥಳ ವಿಚಾರವಾಗಿ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಿವೆ. ಧಾರ್ಮಿಕ ಕ್ಷೇತ್ರದ ವಿಚಾರವಾಗಿ ನಾವು ಯಾರು ಹಸ್ತಕ್ಷೇಪ ಮಾಡಬಾರದು. ಆ ಕ್ಷೇತ್ರಕ್ಕೆ ಬಹಳಷ್ಟು ಭಕ್ತಾದಿಗಳು ನಂಬಿಕೆ ಮತ್ತು ವಿಶ್ವಾಸ ಇಟ್ಟುಕೊಂಡು ಹೋಗುವುದನ್ನು ನಾವು ನೋಡಿದ್ದೇವೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬೇಳೂರು, ಧರ್ಮಸ್ಥಳದಲ್ಲಿ ಸೌಜನ್ಯ ಮತ್ತಿತರ ಪ್ರಕರಣಗಳನ್ನು ಮುಂದಿಟ್ಟುಕೊಂಡು ಗೊಂದಲ ಮೂಡಿಸುವ ಕೆಲಸ ನಡೆಯುತ್ತಿದೆ. ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರ ಗೊಳಿಸಲು ಹೋಗಬೇಡಿ. ನಾವು ಮೊದಲಿನಿಂದಲೂ ಆ ಕ್ಷೇತ್ರದ ಬಗ್ಗೆ ನಂಬಿಕೆ ಇಟ್ಟುಕೊಂಡು ಬಂದಿದ್ದೇವೆ. ವೀರೇಂದ್ರ ಹೆಗ್ಗಡೆ ಅವರ ಬಗ್ಗೆಯೂ ಅಪಾರವಾದ ಗೌರವ ಇದೆ ಎಂದಿದ್ದಾರೆ
ವಿರೋಧ ಇರುವವರು ಎಸ್ಐಟಿ ರಚನೆಗೆ ಒತ್ತಡ ಹಾಕಿದ್ದಾರೆ ಧಾರ್ಮಿಕ ಕ್ಷೇತ್ರದಲ್ಲಿ ಅಪವಿತ್ರ ಗೊಳಿಸುವ ಕೆಲಸವನ್ನು ಸರ್ಕಾರ ಸಹ ಮಾಡಬಾರದು. ಯಾಕೆಂದರೆ ಈ ಹಿಂದೆ ಸಿಗಂದೂರು ಕ್ಷೇತ್ರವನ್ನು ಮುಜರಾಯಿ ಇಲಾಖೆಗೆ ಸೇರಿಸುವ ಕೆಲಸವನ್ನು ಹಿಂದಿನ ಸರ್ಕಾರ ಮಾಡಿತ್ತು. ಸಂಸದರು ಮತ್ತು ಶಾಸಕರು ಸೇರಿಕೊಂಡು ಈ ಕೆಲಸ ಮಾಡಿದ್ದರು. ಹಾಗಾಗಿ ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಹೇಳಿದ್ದಾರೆ.
ಮತ ಕಳವಿನ ಕುರಿತು ರಾಹುಲ್ ಗಾಂಧಿ ಮಾಡಿರುವ ಆರೋಪವನ್ನು ಸುಮ್ಮನೆ ಮಾಡುತ್ತಿಲ್ಲ. ತುರ್ತು ಪರಿಸ್ಥಿತಿಯ ವಿರುದ್ಧ ಬಿಜೆಪಿಯವರು ಏನು ಕಾರ್ಯಕ್ರಮಗಳನ್ನು ತೆಗೆದುಕೊಡರೊ ಅವರು ಸಹ ತುರ್ತು ಪರಿಸ್ಥಿತಿಗಿಂತಲೂ ಕಠಿಣವಾದ ನಿರ್ಧಾರವನ್ನು ಮೋದಿ ತೆಗೆದುಕೊಂಡಂತಿದೆ ಎಂದಿದ್ದಾರೆ.
ಇಡಿ, ಐಟಿ, ಸಿಬಿಐ ಮೂಲಕ ದೇಶದ ಎಲ್ಲಾ ವಿರೋಧ ಪಕ್ಷಗಳನ್ನು ದಮನ ಮಾಡುವ ಕೆಲಸವನ್ನು ನೀವು ಮಾಡಿದ್ದೀರಿ. ಇದೂ ಸಹ ಇತಿಹಾಸ ಅಲ್ಲವೇ, ಚುನಾವಣೆಯಲ್ಲೂ ಏನು ಆಗಿಲ್ಲ ಎಂದು ಹೇಳುವಂತಿಲ್ಲ ನೂರಕ್ಕೆ ನೂರು ಆಗಿರುತ್ತದೆ. ಅದಕ್ಕಾಗಿ ರಾಹುಲ್ ಗಾಂಧಿಯವರು ಆಗಸ್ಟ್ 8 ರಂದು ಬೆಂಗಳೂರಿಗೆ ಬರುತ್ತಿದ್ದಾರೆ. ಇದರ ವಿರುದ್ಧ ಬಿಜೆಪಿಯವರು ಏನೆಂದು ಪ್ರತಿಭಟನೆ ಮಾಡುತ್ತಾರೆ ಎಂದು ಗೊತ್ತಿಲ್ಲವೆಂದು ಹೇಳಿದ್ದಾರೆ.
ಕಳ್ಳ ಮತದಾನ ಮಾಡಿದ್ದೇವೆ ಎಂದು ಅವರು ಪ್ರತಿಭಟನೆ ಮಾಡುತ್ತಾರೆ. ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಇಲ್ಲದಿದ್ದರೆ ಬಿಜೆಪಿಯವರು ಎಲ್ಲಿಗೆ ಹೋಗುತ್ತಿದ್ದರು ? ಮತ ಕಳ್ಳತನ ನಡೆದಿದೆ. ಹಾಗಾಗಿಯೇ ನಾವು ಹೋರಾಟ ಮಾಡುತ್ತೇವೆ. ಕಳ್ಳ ಮತದಾನದ ಮೂಲಕವೇ ಮೋದಿಜಿ ಅವರು ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ ಎಂದು ಹೇಳಿದ್ದಾರೆ.