ಬೆಂಗಳೂರು: ಧರ್ಮಸ್ಥಳದ ವಿರುದ್ಧ ಅಪಪ್ರಚಾರವನ್ನು ಖಂಡಿಸಿ ಬಿಜೆಪಿ ನಾಯಕರು ಧರ್ಮಸಂರಕ್ಷಣಾ ಯಾತ್ರೆಯನ್ನು ಕೈಗೊಂಡಿದ್ದಾರೆ. ಈ ಸಂಬಂಧಿಸಿದಂತೆ ಮಾಜಿ ಸಂಸದ ಡಿ.ಕೆ ಸುರೇಶ್ ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ್ದಾರೆ.
ವರದಿಗಾರರೊಂದಿಗೆ ಮಾತನಾಡಿದ ಸುರೇಶ್, ಬಿಜೆಪಿಯವರು ಧರ್ಮದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಅವರು ಯಾವ ದೇವರನ್ನೂ ಬಿಟ್ಟಿಲ್ಲ, ಅವರಿಗೆ ಎಲ್ಲಿ ಲಾಭ ಆಗುತ್ತದೆ ಅಲ್ಲಿ ಹೋರಾಡುತ್ತಾರೆ. ದೇಶದ ಐಕ್ಯತೆ ಒಗ್ಗಟ್ಟು ಅವರಿಗೆ ಬೇಕಿಲ್ಲ, ಬ್ರಾತೃತ್ವವನ್ನು ಉಳಿಸಿಕೊಳ್ಳುವ ಉದ್ದೇಶ ಅವರಲ್ಲಿಲ್ಲ. ಧರ್ಮಸ್ಥಳದ ವಿಚಾರದಲ್ಲೂ ಹೋರಾಟ ಮಾಡಲು ಹೊರಟಿದ್ದಾರೆ. ಈಗಾಗಲೇ ವಿರೇಂದ್ರ ಹೆಗ್ಡೆ ಸ್ಪಷ್ಟನೆ ಕೊಟ್ಟಿದ್ದಾರೆ. ಬಿಜೆಪಿಯವರು ಸುಖಾಸುಮ್ಮನೇ ಎಲ್ಲದರಲ್ಲೂ ರಾಜಕೀಯ ಮಾಡುತ್ತಾರೆ ಎಂದು ಹೇಳಿದ್ದಾರೆ.
ಅಲ್ಲದೇ , ಬಿಜೆಪಿ ನಾಯಕರಲ್ಲೇ ಸಾಕಷ್ಟು ಗೊಂದಲ ಇವೆ. ಗೊಂದಲ ಸೃಷ್ಟಿಯಾಗಿದ್ದೇ ಕಡಲ ತೀರದ ರಾಜಕಾರಣದಿಂದ. ಇದು ಬಿಜೆಪಿಯವರ ಹೊಟ್ಟೆ ಉರಿ ಕಾರಣವಾಗಿದೆ ಎಂದು ಬಿಜೆಪಿ ವಿರುದ್ಧ ಡಿ. ಕೆ ಸುರೇಶ್ ಆಕ್ರೋಶ ಹೊರಹಾಕಿದರು.



















