ಒನ್ ನೇಷನ್ ಒನ್ ಎಲೆಕ್ಷನ್ ಜಾರಿಗೆ ಸಿದ್ಧತೆ ನಡೆದಿರುವಾಗಲೇ ಒನ್ ನೇಷನ್ ಒನ್ ಟ್ಯಾಕ್ಸ್ ಗೂ ಭರ್ಜರಿ ಡಿಮ್ಯಾಂಡ್ ಕೇಳಿ ಬರುತ್ತಿದೆ. ಅದರಲ್ಲೂ ದೇಶದ ನಾನಾ ರಾಜ್ಯಗಳಲ್ಲಿ ಅಬಕಾರಿ ಸುಂಕದ ತಾರತಮ್ಯ ಹೋಗಲಾಡಿಸಬೇಕು ಎನ್ನುವ ಚರ್ಚೆ ಚರ್ಚೆ ಶುರುವಾಗಿದೆ. ಜಿಎಸ್ ಟಿ ಜಾರಿ ಬಳಿಕ ಪ್ರತಿ ರಾಜ್ಯಗಳಿಗೆ ಆದಾಯದ ದೊಡ್ಡ ಮೂಲ ಎಂದ್ರೆ ಅದು ಅಬಕಾರಿ ತೆರಿಗೆ ಮಾತ್ರ. ಆದದರೆ, ಕೇಂದ್ರ ವಿತ್ತ ಸಚಿವ ನಿರ್ಮಲಾ ಸೀತಾರಾಮನ್ ಗೆ ದೇಶದ ಹಲವು ಸಂಘ, ಸಂಸ್ಥೆಗಳು ಮತ್ತು ಬಾರ್ ಮಾಲೀಕರ ಸಂಘ ನೀಡಿರುವ ಮನವಿಯಲ್ಲಿ ಒನ್ ನೇಷನ್ ಒನ್ ಟ್ಯಾಕ್ಸ್ ಜಾರಿಗೆ ತನ್ನಿ ಎನ್ನುವ ಕೂಗು ಕೇಳಿ ಬಂದಿದೆ. ಗೋವಾದಲ್ಲಿ 100 ರೂ. ಗೆ ಸಿಗುವ ಮದ್ಯ ಅದೇ ಕರ್ನಾಟಕದಲ್ಲಿ 300 ರೂ.ಗೆ ಮಾರಾಟವಾಗುತ್ತಿದೆ.
ನೆರೆಯ ಆಂಧ್ರ, ತೆಲಂಗಾಣದಲ್ಲಿ 200 ರೂಪಾಯಿಗೆ ಸೇಲ್ ಆಗುತ್ತಿದೆ. ಹಾಗೆಯೇ, ದೆಹಲಿ, ಹರ್ಯಾಣ,ಮಹಾರಾಷ್ಟ್ರ, ರಾಜಸ್ಥಾನದಲ್ಲೂ ಬೇರೆ ಬೇರೆ ತೆರಿಗೆಗಳಿವೆ. ಈ ತಾರತಮ್ಯವನ್ನು ಹೋಗಲಾಡಿಸಿ ಒಂದೇ ಬಗೆಯ ತೆರಿಗೆಯನ್ನು ಜಾರಿಗೆ ತರುವಂತೆ ಹಣಕಾಸು ಸಚಿವರಿಗೆ ಮನವಿ ಮಾಡಲಾಗಿದೆ.
ಈಗಾಗಲೇ, ಕರ್ನಾಟಕಕ್ಕೆ ಗೋವಾದಿಂದ ಅಕ್ರಮವಾಗಿ ಮದ್ಯ ಸಾಗಾಟ, ದೆಹಲಿಗೆ ಹರಿಯಾಣದಿಂದ ಕಳ್ಳದಾರಿಯಲ್ಲಿ ಮದ್ಯ ಸಾಗಾಟ ಆಗುತ್ತಿದೆ. ಇದು ಸ್ಥಳೀಯ ಬಾರ್ ಮಾಲೀಕರ ವಹಿವಾಟಿಗೆ ಭಾರಿ ಪೆಟ್ಟು ನೀಡುತ್ತಿದೆ. ಅಲ್ಲದೇ, ಸರ್ಕಾರದ ಬೊಕ್ಕಸಕ್ಕೂ ಅಪಾರ ನಷ್ಟ ಆಗ್ತಿದೆ. ಹೀಗಾಗಿ ಮದ್ಯದ ವಿಚಾರದಲ್ಲಿ ಒನ್ ನೇಷನ್ ಒನ್ ಟ್ಯಾಕ್ಸ್ ಜಾರಿ ಮಾಡಿ ಎನ್ನುವ ಬೇಡಿಕೆ ಸಲ್ಲಿಸಲಾಗಿದೆ. ಇನ್ನು ದೇಶದಲ್ಲೇ ಅಬಕಾರಿ ಸುಂಕ ಕರ್ನಾಟಕದಲ್ಲಿ ಅತಿ ಹೆಚ್ಚು ಎನ್ನುವುದು ವಿಶೇಷ.