ಮಂಡ್ಯ : ಪೌತಿ ಖಾತೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟ ಮದ್ದೂರಿನ ತಗಹಳ್ಳಿ ಗ್ರಾ.ಪಂ ಪಿಡಿಒ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲಗೆ ಬಿದ್ದಿರುವ ಘಟನೆ ಬೆಕ್ಕಳಲೆ ಗ್ರಾಮದಲ್ಲಿ ನಡೆದಿದೆ. ಸಚಿನ್ ಲೋಕಾ ಬಲೆಗೆ ಬಿದ್ದ ಪಿಡಿಒ.
ಮದ್ದೂರಿನ ತಗಹಳ್ಳಿ ಗ್ರಾ.ಪಂ ಪಿಡಿಒ ಆಗಿರುವ ಸಚಿನ್, ಚಿಕ್ಕೋನಹಳ್ಳಿ ಗ್ರಾಮದ ಶಿವಲಿಂಗಯ್ಯ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಪೌತಿ ಖಾತೆ ಮಾಡಿಕೊಡಲು ಸುಮಾರು 5 ಸಾವಿರ ಲಂಚ ಕೇಳಿದ್ದರು.
ಈ ಸಂಬಂಧ ಶಿವಲಿಂಗಯ್ಯ ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಪಿಡಿಒ ಸಚಿನ್ 5 ಸಾವಿರ ಲಂಚ ಪಡೆಯುತ್ತಿದ್ದಾಗಲೇ ಟ್ರ್ಯಾಪ್ ಮಾಡಿದ್ದಾರೆ. ಮಂಡ್ಯ ಲೋಕಾಯುಕ್ತ ಎಸ್ಪಿ ಸರೇಶ್ ಬಾಬು, ಕುಮಾರ್ ಹಾಗೂ ಬ್ಯಾಟರಾಯಗೌಡರಿಂದ ಕಾರ್ಯಾಚರಣೆ ನಡೆದಿದೆ.