ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಡಿಸಿಎಂ ಫೈಟ್ ಜೋರಾಗಿದ್ದು, ಬೀದಿಗೆ ಬಂದು ನಿಂತಿದೆ.
ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ಕಾಂಗ್ರೆಸ್ ನಲ್ಲಿ ಡಿಸಿಎಂ ಪಟ್ಟದ ಫೈಟ್ ಹೆಚ್ಚಾಗುತ್ತಿದೆ. ಡಿ.ಕೆ. ಶಿವಕುಮಾರ್ ಒಬ್ಬರೇ ಡಿಸಿಎಂ ಇದ್ದು, ಹೆಚ್ಚುವರಿ ಡಿಸಿಎಂ ಸ್ಥಾನ ನೀಡಬೇಕು ಎಂಬ ಕೂಗು ಕೇಳಿ ಬರುತ್ತಿದೆ.
ಕೆಲವರು ಮೂವರು ಡಿಸಿಎಂ ಇರಲಿ ಎಂದು ಮನವಿ ಮಾಡುತ್ತಿದ್ದರೆ, ಕೆಲವರು ಐದು ಎಂದು ಹೇಳುತ್ತಿದ್ದಾರೆ. ಹಲವರಂತೂ ಡಜನ್ ಆದರೂ ಆಗಲಿ ಎಂದು ಮನವಿ ಮಾಡುತ್ತಿದ್ದಾರೆ. ಈ ಕೂಗು ಈಗ ಕೇಳಿ ಬಂದಿದ್ದಲ್ಲ. ಡಿಕೆಶಿಯನ್ನು ಡಿಸಿಎಂ ಮಾಡಿದಾಗಿನಿಂದಲೂ ಕೇಳಿ ಬರುತ್ತಿದೆ. ಅಷ್ಟೇ ಅಲ್ಲ, ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಬದಲಿಸುವ ಒಳ ಸಂಚೂ ಇದೆ ಎನ್ನಲಾಗುತ್ತಿದೆ. ಹೀಗೆ ಡಿಸಿಎಂ ಕೂಗು ಎಬ್ಬಿಸಿದವರೆಲ್ಲ ಸಿದ್ದರಾಮಯ್ಯ ಅವರ ಆಪ್ತರು.
ಹೀಗಾಗಿ ಈ ಯುದ್ಧಕ್ಕೆ ಈಗ ಡಿಕೆ ಆಪ್ತರೂ ಎಂಟ್ರಿ ಕೊಟ್ಟಿದ್ದಾರೆ. ಕಾಳಗ ಬೇರೆಯತ್ತ ತಿರುಗುತ್ತಿದೆ. ಈ ಕುರಿತು ಮಂಗಳವಾರ ಮಾತನಾಡಿರುವ ಡಿಸಿಎಂ ಡಿಕೆಶಿ, ಯಾರು ಏನು ಬೇಕಾದರೂ ಬೇಡಿಕೆ ಇಡಲಿ. ಪಾರ್ಟಿ ಯಾರಿಗೆ ಏನು ಉತ್ತರ ಕೊಡಬೇಕೋ ಕೊಡುತ್ತೆ ನೋಡೋಣ ಎಂದಿದ್ದಾರೆ.