ಬಾಗಲಕೋಟೆ:ಉತ್ತರ ಕರ್ನಾಟಕದ ಆಧ್ಯಾತ್ಮಿಕ ಜಗತ್ತಿನ ಪ್ರಮುಖ ದಿವಟಿಕೆಯಾದ, ಅನ್ನದಾಸೋಹದ ಮೂಲಕ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದ ಶ್ರೀ ಬಸವಾಗೋಪಾಲ ನೀಲಮಾಣಿಕ್ಯ ಮಠದ (ಬಂಡಿಗಣಿ ಮಠ) ಚಕ್ರವರ್ತಿ ದಾನೇಶ್ವರ ಸ್ವಾಮೀಜಿ (75) ನಿಧನರಾಗಿದ್ದಾರೆ.
ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಸ್ವಾಮೀಜಿ ಕೊನೆಯುಸಿರೆಳೆದಿದ್ದು, ಇದು ಲಕ್ಷಾಂತರ ಭಕ್ತರನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಕೆಲವು ದಿನಗಳಿಂದ ಲಿವರ್ ಸಂಬಂಧಿತ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಗಳನ್ನು ನಿನ್ನೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ಅವರು ಕೊನೆಯುಸಿರೆಳೆದಿದ್ದಾರೆ.
ರಬಕವಿಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದಲ್ಲಿರುವ ಶ್ರೀ ಬಸವಾಗೋಪಾಲ ನೀಲಮಾಣಿಕ್ಯ ಮಠದ ಪೀಠಾಧಿಪತಿಗಳಾಗಿದ್ದ ದಾನೇಶ್ವರ ಸ್ವಾಮೀಜಿ ಅವರಿಗೆ “ದಾಸೋಹರತ್ನ” ಎಂಬ ಬಿರುದೇ ಅಕ್ಷರಶಃ ಸಾರ್ಥಕವಾಗಿತ್ತು.
ಕಳೆದ ನಾಲ್ಕೂವರೆ ದಶಕಗಳಿಂದ ಮಠದಲ್ಲಿ ನಿರಂತರವಾಗಿ ನಡೆಯುತ್ತಿರುವ ಅನ್ನದಾಸೋಹ ಕಾರ್ಯಕ್ರಮದ ಮೂಲಕ ಲಕ್ಷಾಂತರ ಬಡಬಳಲಿದ ಜನರಿಗೆ ಆಹಾರದ ಭದ್ರತೆ ನೀಡಿದ್ದರು. ದಿನನಿತ್ಯ ಸರಾಸರಿ 5,000 ಜನರಿಗೆ ಅನ್ನ,ಸಾಂಬಾರು, ಪಲ್ಯ,ಚಟ್ನಿ ಸಮೇತ ಉಚಿತ ಊಟದ ವ್ಯವಸ್ಥೆ ನೀಡುತ್ತಿದ್ದ ಮಠ, ಉತ್ತರ ಕರ್ನಾಟಕದ ದೊಡ್ಡ ದಾಸೋಹ ಕೇಂದ್ರಗಳಲ್ಲಿ ಒಂದಾಗಿ ಪ್ರಸಿದ್ಧವಾಗಿದೆ.
ಇದನ್ನೂ ಓದಿ : ಸಾಲಗಾರರಿಗೆ ಗುಡ್ ನ್ಯೂಸ್ : ರೆಪೊ ದರದಲ್ಲಿ 25 ಬೇಸಿಸ್ ಪಾಯಿಂಟ್ ಇಳಿಸಿದ RBI



















