ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಆಂತರಿಕ ಬೇಗುದಿ ತಲೆದೋರಿತ್ತು. ಹೈಕಮಾಂಡ್ ಎಂಟ್ರಿ ಕೊಟ್ಟು ಭಿನ್ನಮತ ಸ್ಫೋಟ ಶಮನಗೊಳಿಸಿದೆ. ಈ ಮಧ್ಯೆ ಸಂಘಟನೆಗೆ ಒತ್ತು ನೀಡಿರುವ ಅವರು ಜಿಲ್ಲಾಧ್ಯಕ್ಷರ ಬದಲಾವಣೆಗೆ ಮುಂದಾಗಿದೆ.



ಒಂದು ಅಥವಾ ಒಂದಕ್ಕಿಂತ ಹೆಚ್ಚು ಅವಧಿಗೆ ಅಧ್ಯಕ್ಷರಾದವರಿಗೆ ಕೋಕ್ ನೀಡಿ ಹೊಸಬರಿಗೆ ಅವಕಾಶ ನೀಡಲು ಕಾಂಗ್ರೆಸ್ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ವೀಕ್ಷಕರನ್ನ ನೇಮಕ ಮಾಡಲಾಗಿದೆ. 21 ಜಿಲ್ಲೆಗಳಲ್ಲಿ ಡಿಸಿಸಿ ಅಧ್ಯಕ್ಷರ ಬದಲಾವಣೆಗೆ ವೀಕ್ಷರ ನೇಮಕ ಮಾಡಲಾಗಿದೆ.