ಬೆಂಗಳೂರು: ಕೇರಳ ಮೂಲದ ಎರಡು ಯುವಕರ ಗುಂಪುಗಳ ಮಧ್ಯೆ ಗಲಾಟೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಮಂಗಲ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಜೂನ್ 7 ಶನಿವಾರ ತಡರಾತ್ರಿ 12:15 ರ ಸುಮಾರಿಗೆ ಈ ಘಟನೆ ನಡೆದಿತ್ತು. ಕೇರಳ ಮೂಲದ ಯುವಕರು ಶನಿವಾರ ಪಬ್ ಗೆ ತೆರಳಿ ಮರಳಿ ಬಂದಿದ್ದ ವೇಳೆ ಈ ಘಟನೆ ನಡೆದಿತ್ತು. ಎರಡು ಪ್ರತ್ಯೇಕ ತಂಡಗಳಾಗಿ ಪಬ್ ಗೆ ಹೋಗಿ ಈ ಕೇರಳ ಗ್ಯಾಂಗ್ ಹೊರ ಬಂದಿತ್ತು. ಹೊರಗೆ ಬರುತ್ತಿದ್ದಂತೆ ಒಂದು ಗ್ಯಾಂಗ್ ಮತ್ತೊಂದು ಗ್ಯಾಂಗ್ ನಲ್ಲಿದ್ದ ಯುವತಿಯನ್ನು ಮಾತನಾಡಿಸಿದ್ದಕ್ಕೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಓರ್ವನಿಗೆ ಗಂಭೀರ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಹಲ್ಲೆ ಮಾಡಿರುವ ಐವರನ್ನು ಪೊಲೀಸರು ಬಂಧಿಸದ್ದಾರೆ.