ಸಿಯಾಟಲ್: ಜನ್ಮದತ್ತ ಪೌರತ್ವವನ್ನು ರದ್ದು ನಿಯಮವನ್ನು ರದ್ದು ಮಾಡುವ ಡೊನಾಲ್ಡ್ ಟ್ರಂಪ್ ಅವರ ಆದೇಶಕ್ಕೆ ಸಿಯಾಟಲ್ ರಾಜ್ಯದ ಫೆಡರಲ್ ನ್ಯಾಯಾಲವು ತಡೆ ನೀಡಿದೆ. ಟ್ರಂಪ್ ಅವರ ಈ ನಿರ್ಧಾರ ಅಸಂವಿಧಾನಿಕ ಎಂದು ಕರೆದಿದೆ.
ಟ್ರಂಪ್ ತೆಗೆದುಕೊಂಡಿರುವ ನಿರ್ಧಾರ ಜಾಗತಿಕವಾಗಿ ಚರ್ಚೆಯ ವಿಚಾರವಾಗಿತ್ತು. ಅಮೆರಿಕದಲ್ಲಿ ಕೆಲಸ ಮಾಡುವ ಹಾಗೂ ನೆಲೆಯೂರುವ ಲಕ್ಷಾಂತರ ಮಂದಿಯ ಕನಸು ನುಚ್ಚುನೂರು ಮಾಡಿತ್ತು. ಹೀಗಾಗಿ ರದ್ದು ಮಾಡುವ ಟ್ರಂಪ್ (Donald Trump) ಆದೇಶಕ್ಕೆ ದೊಡ್ಡ ಮಟ್ಟಿನ ವಿರೋಧ ವ್ಯಕ್ತಗೊಂಡಿತ್ತು. ತಾಯಿ ಕಾನೂನುಬದ್ಧವಾಗಿ ಅಮೆರಿಕದ ಖಾಯಂ ನಿವಾಸಿಯಾಗಿದ್ದು, ತಂದೆ ತಾತ್ಕಾಲಿಕ ನಾಗರಿಕನಾಗಿದ್ದರೆ ಅಂಥವರು ಹುಟ್ಟಿನಿಂದಾಗಿ ಸಿಗುವ ಪೌರತ್ವಕ್ಕೆ ಅರ್ಹರಲ್ಲ.
ಕೋರ್ಟ್ ಆದೇಶದಿಂದಾಗಿ ಅವರಿಗೆ ಮುಖಭಂಗವಾಗಿದೆ. ಟ್ರಂಪ್ ಅವರ ಆದೇಶ ಪ್ರಶ್ನಿಸಿ ಹಲವು ರಾಜ್ಯಗಳು ಕೋರ್ಟ್ ಮೆಟ್ಟಿಲೇರಿದ್ದವು. ಇದೀಗ ನ್ಯಾಯಮೂರ್ತಿ ಜಾನ್ ಕಫೆನಾರ್ ಟ್ರಂಪ್ ಆದೇಶಕ್ಕೆ 14 ದಿನಗಳ ತಾತ್ಕಾಲಿಕ ತಡೆ ನೀಡಿದ್ದಾರೆ.
ಫೆಡರಲ್ ಕೋರ್ಟ್ ನ್ಯಾಯಾಧೀಶರು ಟ್ರಂಪ್ ನಿರ್ಧಾರ ಅಸಂವಿಧಾನಿಕ ಎಂದು ಕರೆದಿದ್ದಾರೆ. ಡೆಮಾಕ್ರಟಿಕ್ ನೇತೃತ್ವದ ನಾಲ್ಕು ರಾಜ್ಯಗಳು ಈ ಬಗ್ಗೆ ಮನವಿ ಮಾಡಿದ್ದವು. ನ್ಯಾಯಾಧೀಶ ಜಾನ್ ಕೋಘೆನೂರ್ ಅವರು ಆದೇಶವನ್ನು ಜಾರಿಗೊಳಿಸದಂತೆ ತಾತ್ಕಾಲಿಕ ತಡೆಯಾಜ್ಞೆ ನೀಡಿದ್ದಾರೆ. ಟ್ರಂಪ್ ನೀಡಿದ ಆದೇಶದ ಪ್ರಕಾರ ಜನನ ಹಕ್ಕು ಪೌರತ್ವವನ್ನು ಕೊನೆಗೊಳಿಸಲು ಫೆ.20 ಕೊನೆಯ ದಿನಾಂಕವಾಗಿದೆ.
ಈ ಮೊದಲು ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಸ್ವಾಭಾವಿಕವಾಗಿ ಅಲ್ಲಿನ ನಾಗರಿಕತ್ವ ದೊರಕುತ್ತಿತ್ತು. ಇದನ್ನು ಬಳಸಿಕೊಂಡು ಅನೇಕರು ತಾತ್ಕಾಲಿಕ ವೀಸಾ ಪಡೆದು ಅಥವಾ ಅಮೆರಿಕ್ಕೆ ಹೋಗಿ ಮಕ್ಕಳಿಗೆ ಜನ್ಮ ನೀಡುತ್ತಿದ್ದರು. ಫೆ.19ರ ಬಳಿಕ ಜನಿಸುವ ಮಕ್ಕಳ ಪೋಷಕರಲ್ಲಿ ಒಬ್ಬರಾದರೂ ಅಮೆರಿಕ ನಾಗರಿಕ ಆಗಿರಬೇಕು ಅಥವಾ ಅಮೆರಿಕದ ಮಿಲಿಟರಿಯಲ್ಲಿ ಸೇವೆ ಸಲ್ಲಿಸಬೇಕು ಎಂದು ಹೊಸ ಆದೇಶ ಹೇಳುತ್ತದೆ.
ಭಾರತೀಯರ ಮೇಲೇನು ಪರಿಣಾಮ?
ಅಮೆರಿಕದಲ್ಲಿ ಸದ್ಯ 54 ಲಕ್ಷ ಭಾರತೀಯರು ನೆಲೆಸಿದ್ದಾರೆ. ಇವರಲ್ಲಿ ಶೇ.66ರಷ್ಟು ಜನ ವಲಸಿಗರಾಗಿದ್ದು, ಶೇ.34 ಜನ ಮಾತ್ರ ಅಮೆರಿಕ ನಾಗರಿಕರಾಗಿದ್ದಾರೆ. ಎಚ್1ಬಿ ವೀಸಾ ಹಾಗೂ ಪ್ರವಾಸಿ ವೀಸಾದ ಮೇಲೆ ನೆಲೆಸಿರುವ ಭಾರತೀಯರಿಗೆ ಮಕ್ಕಳಾದರೆ ಅವರು ಪೌರತ್ವಕ್ಕಾಗಿ ಮತ್ತೆ ಅರ್ಜಿ ಸಲ್ಲಿಸಬೇಕು. ಇಲ್ಲವೇ ಪ್ರವಾಸಿ ವೀಸಾ ಪಡೆದು ತೆರಳಬೇಕಾಗಿದೆ. ಸದ್ಯ ಟ್ರಂಪ್ ಅವರ ಈ ಆದೇಶಕ್ಕೆ ಭಾರತೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.