ಮಂಡ್ಯ : ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಹೂವಿನ ತೋಟಕ್ಕೆ ಕಿಡಿಗೇಡಿಗಳು ವಿಷ ಸಿಂಪಡಣೆ ನಡೆಸಿರುವ ಘಟನೆ ಮಂಡ್ಯದ ಪಾಂಡವಪುರದ ಸುಂಡಳ್ಳಿ ಗ್ರಾಮದಲ್ಲಿ ನಡೆದಿದೆ.

ರೈತ ಮಧು ಎಂಬುವವರು ಸುಮಾರು 2 ಎಕರೆ ಪ್ರದೇಶದಲ್ಲಿ ಸೇವಂತಿಗೆ ಹೂ ಬೆಳೆದಿದ್ದರು. ಆದರೆ, ಕಿಡಿಗೇಡಿಗಳು ವಿಷ ಸಿಂಪಡಿಸಿರುವುದರಿಂದ ಕಟಾವಿಗೆ ಬಂದಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಹೂ ಗಿಡಗಳು ಬಾಡಿವೆ.
ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದ್ದು, ಲಕ್ಷಾಂತರ ರೂ. ನಷ್ಟದಿಂದ ರೈತ ಕಂಗಾಲಾಗಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸದ್ಯ ಕಿಡಿಗೇಡಿಗಳ ವಿರುದ್ದ ಕೆಆರ್‌ಎಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.



















