ಕಲಬುರಗಿ: ಬಸ್ ಚಲಿಸುತ್ತಿದ್ದಾಗಲೇ ನಿರ್ವಾಹಕ ಹೃದಯಾಘಾತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ.
ಈ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಫರಹತಾಬಾದ್ ಬಳಿ ನಡೆದಿದೆ. ಯಡ್ರಾಮಿ ತಾಲೂಕಿನ ಜವಳಗಾ ಗ್ರಾಮದ ಕಾಶೀನಾಥ್ (50) ಹೃದಯಾಘಾತಕ್ಕೆ ಬಲಿಯಾಗಿರುವ ನಿರ್ವಾಹಕ ಎನ್ನಲಾಗಿದೆ. ಸಾರಿಗೆ ಬಸ್‍ನಲ್ಲೇ (Bus) ಹೃದಯಾಘಾತದಿಂದ (Heart Attack) ಕಂಡಕ್ಟರ್ ಸಾವನ್ನಪ್ಪಿದ್ದಾರೆ.
ಬಸ್ ಕಲಬುರಗಿಯಿಂದ ಜೇವರ್ಗಿಗೆ ಹೊರಟಿದ್ದ ವೇಳೆ ಫರಹತಾಬಾದ್ ಬಳಿ ಏಕಾಏಕಿಯಾಗಿ ಕುಸಿದು ಬಿದ್ದದ್ದಾರೆ. ತಕ್ಷಣ ಚಾಲಕ ಹಾಘೂ ಪ್ರಯಾಣಿಕರು ಸೇರಿ ಬಸ್‍ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಅಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಫರಹತಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.