ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಬಂಪರ್ ಸುದ್ದಿಯೊಂದು ಸಿಕ್ಕಿದೆ. ಸಂಬಳ(salary) ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಹೀಗಾಗಿ ಕೇಂದ್ರ ಸರ್ಕಾರಿ(central government) ನೌಕರರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ಎಂಟನೇ ವೇತನ ಆಯೋಗದ ರಚನೆಗೆ ಕೇಂದ್ರ ಸಚಿವ ಸಂಪುಟ ಸಭೆಯು (Union Cabinet meeting) ಅನುಮೋದನೆ ನೀಡಿದ್ದು, ಲಕ್ಷಾಂತರ ನೌಕರರ ಸಂಬಳದಲ್ಲಿ ಭಾರಿ ಏರಿಕೆಯಾಗಲಿದೆ. ಅದರಲ್ಲೂ, ನೌಕರರ ಬೇಸಿಕ್ ಸಂಬಳವೇ ಶೇ.186ರಷ್ಟು ಏರಿಕೆಯಾಗಲಿದೆ ಎನ್ನಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರವು ನೌಕರರಿಗೆ ಹೊಸ ವರ್ಷದ ಉಡುಗೊರೆ ನೀಡಿದಂತಾಗಿದೆ.
8ನೇ ವೇತನ ಆಯೋಗ ರಚನೆಯಾಗಿ, ಅದರ ಶಿಫಾರಸುಗಳು ಜಾರಿಗೆ ಬಂದರೆ ನೌಕರರ ಸಂಬಳ ಮಾತ್ರ ಹಲವು ಪಟ್ಟು ಒಂದೇ ಸಮಯಕ್ಕೆ ಏರಿಕೆಯಾಗಲಿದೆ. ಬೇಸಿಕ್ ಸ್ಯಾಲರಿಯೇ 18 ಸಾವಿರ ರೂ.ನಿಂದ 51,480 ರೂ.ಗೆ ಏರಿಕೆಯಾಗಲಿದೆ. ಅಂದರೆ, ಬೇಸಿಕ್ ಸಂಬಳದಲ್ಲಿಶೇ.186ರಷ್ಟು ಹೆಚ್ಚಾಗಲಿದೆ ಎನ್ನಲಾಗುತ್ತಿದೆ. ಪಿಂಚಣಿ ಕೂಡ 9 ಸಾವಿರ ರೂ.ನಿಂದ 25,740 ರೂ.ಗೆ ಏರಿಕೆಯಾಗಲಿದೆ ಎನ್ನಲಾಗಿದೆ.
ಕೇಂದ್ರ ಸರ್ಕಾರವು 8ನೇ ವೇತನ ಆಯೋಗದ ರಚನೆಗೆ ಅನುಮೋದನೆ ನೀಡಿದೆ ಅಷ್ಟೆ. 2026ರವರೆಗೂ ಕೇಂದ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಅನ್ವಯವೇ ಸಂಬಳ ಇರಲಿದೆ. ಅಂದರೆ, ಅಲ್ಲಿಯವರೆಗೂ ಈಗಿರುವ ಸಂಬಳವೇ ಮುಂದುವರೆಯುತ್ತದೆ.