ನವದೆಹಲಿ: ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತವು ಪಾಕಿಸ್ತಾನದ ಮೇಲೆ ಕೈಗೊಂಡ ದಾಳಿಯ ವೇಳೆ ಬ್ರಹ್ಮೋಸ್ ಕ್ಷಿಪಣಿಗಳನ್ನು ಬಳಸಲಾಗಿತ್ತು. ಉಗ್ರರು ಹಾಗೂ ಪಾಕಿಸ್ತಾನದ ಸೇನಾ ನೆಲೆಗಳನ್ನು ಹೊಡೆದುರುಳಿಸುವಲ್ಲಿಬ್ರಹ್ಮೊಸ್ ಕ್ಷಿಪಣಿಗಳು ನಿರ್ಣಾಯಕ ಪಾತ್ರ ನಿರ್ವಹಿಸುತ್ತಿದ್ದವು. ಇದರ ಬೆನ್ನಲ್ಲೇ, ಭಾರತದಲ್ಲಿಉತ್ಪಾದಿಸುವ ಬ್ರಹ್ಮೋಸ್ ಖಂಡಾಂತರ ಕ್ಷಿಪಣಿಗಳಿಗೆ ಸುಮಾರು 17 ದೇಶಗಳಿಂದ ಬೇಡಿಕೆ ಉಂಟಾಗಿದೆ ಎಂದು ತಿಳಿದುಬಂದಿದೆ.
ಭಾರತದಲ್ಲಿ ಡಿ ಆರ್ ಡಿ ಒ ಹಾಗೂ ರಷ್ಯಾದ ಸಹಯೋಗದಲ್ಲಿ ಬ್ರಹ್ಮೋಸ್ ಕ್ಷಿಪಣಿಗಳನ್ನು ಉತ್ಪಾದಿಸಲಾಗುತ್ತಿದೆ. ಈಗಾಗಲೇ ಫಿಲಿಪ್ಪೈನ್ಸ್ ಗೆ ಕ್ಷಿಪಣಿಗಳನ್ನು ಪೂರೈಸಿದೆ. ಇನ್ನು, ಪಾಕಿಸ್ತಾನಕ್ಕೆ ತಿರುಗೇಟು ನೀಡಿದ ಬಳಿಕ ಇಂಡೋನೇಷ್ಯಾ, ವಿಯೇಟ್ನಾಂ, ಮಲೇಷ್ಯಾ, ಬ್ರೆಜಿಲ್, ಚಿಲಿ ಸೇರಿ ಸುಮಾರು 17 ದೇಶಗಳು ಬ್ರಹ್ಮೋಸ್ ಕ್ಷಿಪಣಿಗಳನ್ನು ಖರೀದಿಸಲು ಸರತಿ ಸಾಲಿನಲ್ಲಿನಿಂತಿವೆ ಎಂದು ಹೇಳಲಾಗುತ್ತಿದೆ.
ಬ್ರಹ್ಮೋಸ್ ಖಂಡಾಂತರ ಕ್ಷಿಪಣಿಯಾಗಿದ್ದು, ಇದು ಭೂಮಿ, ಸಮುದ್ರ ಮತ್ತು ವಾಯು-ಆಧಾರಿತ ಗುರಿಗಳನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದನ್ನು ಭೂ-ಆಧಾರಿತ ಟ್ರಾನ್ಸ್ಪೋರ್ಟರ್ ಎರೆಕ್ಟರ್ ಲಾಂಚರ್ ಗಳು, ಹಡಗುಗಳು, ಜಲಾಂತರ್ಗಾಮಿ ನೌಕೆಗಳು ಮತ್ತು ಯುದ್ಧವಿಮಾನಗಳಿಂದಲೂ ಉಡಾವಣೆ ಮಾಡಬಹುದು. ಬ್ರಹ್ಮೋಸ್ ಕ್ಷಿಪಣಿಗಳು ಸುಮಾರು 800-900 ಕಿಲೋಮೀಟರ್ ವ್ಯಾಪ್ತಿಯವರೆಗೆ ಕಾರ್ಯಾಚರಣೆ ನಡೆಸಬಲ್ಲವು.
ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದಲ್ಲಿಬ್ರಹ್ಮೋಸ ಕ್ಷಿಪಣಿ ತಯಾರಿಕಾ ಘಟಕಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಸುಮಾರು 300 ಕೋಟಿ ರೂಪಾಯಿ ವೆಚ್ಚದಲ್ಲಿಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಕಾರ್ಖಾನೆಯನ್ನು ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರವು ಮೊದಲ ಹಂತದಲ್ಲಿ1,600 ಹೆಕ್ಟೇರ್ ಜಾಗವನ್ನು ಸ್ವಾಧೀನಪಡಿಸಿಕೊಂಡಿದ್ದು, ರಕ್ಷ ಣಾ ಕಾರಿಡಾರ್ ಗೆ ಹಂಚಿಕೆ ಮಾಡಿದೆ. ಈ ಬ್ರಹ್ಮೋಸ್ ಕಾರ್ಖಾನೆಯಲ್ಲಿಪ್ರತಿ ವರ್ಷ 80-100 ಬ್ರಹ್ಮೋಸ್ ಕ್ಷಿಪಣಿಗಳನ್ನು ಉತ್ಪಾದನೆ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.