ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್‌ನ ಪ್ರಮುಖ ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ತಲೆಮರೆಸಿಕೊಂಡಿದ್ದಾನೆ. ವಾರ ಕಳೆದರೂ ಕೂಡ ಆರೋಪಿಯ ಸುಳಿವಿಲ್ಲದಂತಾಗಿದೆ.
ತಲೆಮರೆಸಿಕೊಂಡಿರುವ ಜಗ್ಗನ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಲು ತಯಾರು ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಜುಲೈ 16ರಂದು ಆರೋಪಿ ಜಗ್ಗ ಚೆನ್ನೈಗೆ ಪರಾರಿಯಾಗಿದ್ದ. ಜು.16ರಂದು ರಾತ್ರಿ ಚೆನ್ನೈನಿಂದ ದುಬೈಗೆ ಪರಾರಿಯಾಗಿದ್ದಾನೆ. ಚೆನ್ನೈನಿಂದ ದುಬೈಗೆ ತೆರಳಿರುವ ಟಿಕೇಟ್, ಪಾಸ್‌ಪೋರ್ಟ್‌ಗಳನ್ನು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ದುಬೈನಲ್ಲಿರುವ ಜಾಗವನ್ನು ಶೋಧ ನಡೆಸುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಲುಕ್ ಔಟ್ ನೋಟಿಸ್ ಗೆ ಭಾರತಿನಗರ ಠಾಣೆ ಪೊಲೀಸರ ಸಿದ್ಧತೆ ಮಾಡಿಕೊಂಡಿದ್ದು, ಈಗಾಗಲೇ ಪಾಸ್ ಪೋರ್ಟ್ ಅನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಜಗ್ಗನ ಬಂಧನಕ್ಕೆ ಬಲೆ ಬೀಸಿದ್ದಾರೆ. ಕೊಲೆಯಾದ ದಿನ ಕುಟುಂಬ ಸಮೇತವಾಗಿ ಜಗ್ಗ ಅಲಿಯಾಸ್ ಜಗದೀಶ್ ಪರಾರಿಯಾಗಿದ್ದಾನೆಂದು ತಿಳಿದು ಬಂದಿದ್ದು, ಆರೋಪಿ ಜಗ್ಗನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.