ಹೋಂ ಗಾರ್ಡ್ ಕಪಾಳಕ್ಕೆ ಹೊಡೆದು ಬೈಕ್ ಸವಾರ ದುರ್ವರ್ತನೆ ತೋರಿರುವ ಘಟನೆಯೊಂದು ಸಿಲಿಕಾನ್ ಸಿಟಿಯ ಎಸ್ಟೀಮ್ ಮಾಲ್ ಸರ್ಕಲ್ ಸಿಗ್ನಲ್ ಹತ್ತಿರ ನಡೆದಿದೆ.
ನಂಬರ್ ಪ್ಲೇಟ್ ಇಲ್ಲದ ಬೈಕ್ ನಲ್ಲಿ ವ್ಯಕ್ತಿಯೋರ್ವ ಬಂದು ಒನ್ ವೇನಲ್ಲಿ ಯೂಟರ್ನ್ ತೆಗದುಕೊಳ್ಳಲು ಬೈಕ್ ಸವಾರ ಮುಂದಾಗಿದ್ದಾನೆ. ಆಗ ಅದನ್ನು ಹೋಂ ಗಾರ್ಡ್ ಪ್ರಶ್ನಿಸಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಹೋಂ ಗಾರ್ಡ್ ಕಪಾಳಕ್ಕೆ ಹೊಡೆದು ಬೈಕ್ ಸವಾರ ಎಸ್ಕೇಪ್ ಆಗಿದ್ದಾರೆ.
ಈ ಘಟನೆ ಮೇ 4ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ದೃಶ್ಯ ಹಿಂಬದಿ ವಾಹನದ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯವನ್ನು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಎಕ್ಸ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಹೆಬ್ಬಾಳ ಸಂಚಾರ ವಿಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.