ಬಿಹಾರದಲ್ಲಿ ಎನ್‌ಡಿಎ ಭರ್ಜರಿ ಗೆಲುವು ಸಾಧಿಸಿದೆ. ಈ ವಿಚಾರವಅಗಿ ಮಾತನಾಡಿದ ರಾಮಲಿಂಗರೆಡ್ಡಿ ಬಿಹಾರ ಚುನಾವಣೆ ಚುನಾವಣೆಯಲ್ಲ, ಬಿಹಾರದಲ್ಲಿ ನ್ಯಾಯ ಸಮ್ಮತವಾಗಿ ಚುನಾವಣೆ ನಡೆದಿಲ್ಲ ಎಂದು ಆಕ್ರೋಶಿಸಿದ್ದಾರೆ.
ಕಾಂಗ್ರೆಸ್ ಮತದಾರರನ್ನು ಉದ್ದೇಶಪೂರ್ವಕವಾಗಿ ಡಿಲೀಟ್ ಮಾಡಿದ್ದಾರೆ. ಬಿಹಾರದಲ್ಲಿ 20 ವರ್ಷಗಳಿಂದ ನಿತೀಶ್ ಕುಮಾರ್ ಆಡಳಿತವಿದೆ. 14 ವರ್ಷಗಳಿಂದ ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕೇಂದ್ರ ಮತ್ತು ರಾಜ್ಯದಲ್ಲಿ ಚುನಾವಣಾ ಆಯೋಗವಿದೆ. ಇವರೇ ಸೇರಿಸಿದ್ದ 47 ಲಕ್ಷ ಜನ ಮತದಾರರನ್ನು ಡಿಲೀಟ್ ಮಾಡಿದ್ರು, 18 ಲಕ್ಷ ಮತದಾರರನ್ನು ಹೊಸದಾಗಿ ಚುನಾವಣೆ ವೇಳೆ ಸೇರಿಸಿದ್ದಾರೆ ಎಂದಿದ್ದಾರೆ.
ಆದ್ರೆ ಚುನಾವಣೆಗು ಮುಂಚೆ ಮಹಿಳೆಯರಿಗೆ 10 ಸಾವಿರ ಹಣ ಹಂಚಿಕೆಯಾಗಿದೆ. 1 ಕೋಟಿ 25 ಲಕ್ಷ ಜನರಿಗೆ 10 ಸಾವಿರ ಹಣ ಸರ್ಕಾರ ಹಂಚಿದೆ. ಚುನಾವಣಾ ನೀತಿ ಸಂಹಿತೆ ಸಂಪೂರ್ಣವಾಗಿ ನೆಲಕಚ್ಚಿದೆ. ಹಾಗಾಗಿ ಕೇಂದ್ರ ಚುನಾವಣಾ ಆಯೋಗ ಬಿಜೆಪಿ ಜೊತೆ ಶಾಮೀಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ : 100 ವರ್ಷದಲ್ಲಿ ಮೊದಲ ಬಾರಿಗೆ RSS ಸಂವಿಧಾನಿಕ ನಿಯಮ ಪಾಲಿಸಿದೆ | ಪ್ರಿಯಾಂಕ್ ಖರ್ಗೆ ವಾಗ್ದಾಳಿ



















