‘ಬಿಗ್‌ಬಾಸ್ ಕನ್ನಡ 12’ ಕಾರ್ಯಕ್ರಮಕ್ಕೆ ಅದ್ಧೂರಿ ತೆರೆಬಿದ್ದಿದೆ. ಹಲವು ವೀಕ್ಷಕರ ನಿರೀಕ್ಷೆಯಂತೆ ಗಿಲ್ಲಿ ನಟ ವಿನ್ನರ್ ಆಗಿದ್ದಾರೆ. ಆರಂಭದಿಂದಲ್ಲೂ ‘ವಿನ್ನರ್ ಆಗೋದು ಗಿಲ್ಲಿ ನಟ’ ಎಂಬ ಮಾತು ಕೇಳಿಬರುತ್ತಲೇ ಇತ್ತು. ಗಲ್ಲಿ ಗಲ್ಲಿಯಲ್ಲಿಯೂ ಗಿಲ್ಲಿ ನಟನ ಹವಾ ಜೋರಾಗಿತ್ತು. ಅದರಂತೆ ಗಿಲ್ಲಿ ಗೆದ್ದಿದ್ದಾರೆ. ಆ ಮೂಲಕ ‘ವ್ಯಕ್ತಿತ್ವದ ಆಟದಲ್ಲಿ ಗೆಲ್ಲೋದು ಹೀರೋನೇ’ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ಶುರುವಿನಿಂದಲೂ ಒನ್ ಸೈಡೆಡ್ ಆಗಿದ್ದ ‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದಲ್ಲಿ ಗಿಲ್ಲಿ ಗೆಲುವಿನ ನಗೆ ಬೀರಿದ್ದಾರೆ.
ವಿನ್ನರ್ ಆದ ಗಿಲ್ಲಿ ಅವರಿಗೆ ಕಿಚ್ಚ ಸುದೀಪ್ ಅವರು 10 ಲಕ್ಷ ರೂ ನೀಡುವುದಾಗಿ ಅನೌನ್ಸ್ ಮಾಡಿದರು. ಪ್ರತಿ ಸೀಸನ್ ನಂತೆಯೇ ಈ ಬಾರಿಯೂ ಬಿಗ್‌ಬಾಸ್ ವಿನ್ನರ್ ಗಿಲ್ಲಿಗೆ ಟ್ರೋಫಿ ಜೊತೆಗೆ 50 ಲಕ್ಷ ಹಾಗೂ ಮಾರುತಿ ಸುಜುಕಿ ಎಸ್‌ಯುವಿ ವಿಕ್ಟೋರಿಯಸ್ ಕಾರನ್ನು ಬಹುಮಾನದ ರೂಪದಲ್ಲಿ ನೀಡಲಾಗಿದೆ. ವಿಶೇಷ ಎಂದರೆ ಕಿಚ್ಚ ಸುದೀಪ್ ಅವರು ವೈಯಕ್ತಿಕವಾಗಿ ಪ್ರೀತಿಯಿಂದ 10 ಲಕ್ಷ ಕೊಡುತ್ತಿದ್ದೇನೆ ಎಂದು ವೇದಿಕೆ ಮೇಲೆ ಘೋಷಿಸಿದ್ದಾರೆ.
ಕಳೆದ ಆವೃತ್ತಿಯಲ್ಲಿ ಹನುಮಂತ ವಿನ್ನರ್ ಆಗಿದ್ದು ಅವರು 5 ಕೋಟಿಗೂ ಹೆಚ್ಚು ಮತಗಳನ್ನು ಪಡೆದಿದ್ದರು. ಆದರೆ ಈ ಬಾರಿ ಯಾರೂ ಮುಟ್ಟಲಾಗದಂತ ದಾಖಲೆಯ ವೋಟುಗಳು ವಿನ್ನರ್ ಗೆ ಸಿಕ್ಕಿದೆ. ಅದುವೇ ಗಿಲ್ಲಿ ಎಂಬುದು ಅಂತೂ ಸಾಬೀತಾಗಿದೆ.
‘ಬಿಗ್ ಬಾಸ್’ ಮನೆಯೊಳಗೆ ಜಂಟಿ ಆಗಿ ಕಾಲಿಟ್ಟವರು ಗಿಲ್ಲಿ ನಟ. ತಮ್ಮ ಪೇರ್ ಆಗಿದ್ದ ಕಾವ್ಯ ಅವರನ್ನ ಈವರೆಗೂ ಗಿಲ್ಲಿ ನಟ ಎಲ್ಲೂ, ಎಂದೂ ಬಿಟ್ಟುಕೊಟ್ಟಿಲ್ಲ. ಬಿಗ್ ಬಾಸ್ ಸ್ಪರ್ಧಿಯಾಗಿದ್ದುಕೊಂಡು ಅತೀ ಕಡಿಮೆ ಸಮಯದಲ್ಲಿ ಇನ್ಟಾಗ್ರಾಮ್‌ನಲ್ಲಿ 1M ಫಾಲೋವರ್ಸ್ ಪಡೆದ ಮೊದಲ ಸ್ಪರ್ಧಿಯಾಗಿ ಗಿಲ್ಲಿ ದಾಖಲೆ ಬರೆದರು.
ಟ್ಯಾಟೂನಿಂದ ಹಿಡಿದುಕೊಂಡು, ಪ್ರತಿ ಗಲ್ಲಿಯಲ್ಲಿ ಗಿಲ್ಲಿ ಬ್ಯಾನರ್ ಹಾಕಿ ಸ್ವತಃ ಅಭಿಮಾನಿಗಳೇ ಪ್ರಚಾರ ಮಾಡಿದ್ದರು. ಈ ಮೊದಲು ಅಶ್ವಿನಿ ಹಾಗೂ ಜಾನ್ವಿಗೆ ಬಳಕೆ ಮಾಡಿದ್ದ ‘ದೊಡ್ಡವ್ವ..’ ಡೈಲಾಗ್ ಹಾಡು ಸಖತ್ ಫೇಮಸ್ ಕೂಡ ಆಯ್ತು. ಸಾಂಗ್ ಆಗಿಯೂ ಪರಿವರ್ತನೆ ಆಗಿ ರೀಲ್ಸ್ ಮಾಡಲು ಶುರು ಮಾಡಿದ್ದರು ಅಭಿಮಾನಿಗಳು.
ಇದನ್ನೂ ಓದಿ: BBK-12 ರನ್ನರ್ ಅಪ್ ರಕ್ಷಿತಾ ಶೆಟ್ಟಿ.. ಕೋಟ್ಯಾಂತರ ಮನಸ್ಸುಗಳನ್ನು ಗೆದ್ದ ಕರಾವಳಿ ಪೋರಿ!



















