ವಿಶ್ವದಲ್ಲಿ ಯಾವುದೇ ಮೂಲೆಯಲ್ಲಿ ಯುದ್ಧ ನಡೆದರೂ ಎಂಟ್ರಿ ಕೊಡುವ ಅಮೆರಿಕಾ ಥಾಯ್ಲೆಂಡ್-ಕಾಂಬೋಡಿಯಾ ವಾರ್‌ನಲ್ಲೂ ಮಧ್ಯಪ್ರವೇಶ ಮಾಡಿದೆ.
ಯುದ್ಧ ನಿಲ್ಲಿಸಲಿದಿದ್ದರೆ ಎರಡೂ ದೇಶಗಳ ಜೊತೆಗಿನ ವ್ಯಾಪಾರ ಸಂಬಂಧ ಕಡಿದುಕೊಳ್ಳುವುದಾಗಿ ಡೊನಾಲ್ಡ್ ಟ್ರಂಪ್ ಬೆದರಿಕೆ ಸಂದೇಶ ರವಾನಿಸಿದ್ದಾರೆ. ಶಾಂತಿ ಮಾತುಕತೆಗೆ ಒಲವು ತೋರಿದ ಎರಡೂ ದೇಶಗಳ ನಾಯಕರೊಂದಿಗೆ ಟ್ರಂಪ್ ಮಾತುಕತೆ ನಡೆಸಿದ್ದಾರೆ.
ಈ ಯುದ್ಧ ಭಾರತ-ಪಾಕ್ ಸಂಘರ್ಷವನ್ನು ನೆನಪಿಸುತ್ತದೆ. ಅದನ್ನು ಯಶಸ್ವಿಯಾಗಿ ನಿಲ್ಲಿಸಲಾಯಿತು. ಇಲ್ಲಿಯೂ ಸಹ ಶಾಂತಿಯನ್ನು ಸ್ಥಾಪಿಸಬಹುದಾಗಿದೆ. ಒಂದ್ವೇಳೆ ಯುದ್ಧ ಕೊನೆಗೊಳಿಸಿ ಶಾಂತಿ ಸ್ಥಾಪಿಸದಿದ್ದರೆ ಅಮೆರಿಕ ಈ ದೇಶಗಳ ಜೊತೆ ಯಾವ್ದೇ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವುದಿಲ್ಲ. ಟ್ರಂಪ್ ಹೀಗೆ ಎಚ್ಚರಿಕೆ ನೀಡಿದ್ದಾರೆ.



















