ಬೆಂಗಳೂರು: ಬಿಬಿಎಂಪಿ ಬಜೆಟ್ ಗೆ ಕೆಲವೇ ದಿನಗಳು ಬಾಕಿ ಇರುವುದರಿಂದಾಗಿ ಪಾಲಿಕೆಗೆ ಸಾರ್ವಜನಿಕರಿಂದ ಸಲಹೆಗಳ ಮಹಾಪೂರವೇ ಬರುತ್ತಿವೆ.
ಸಿಲಿಕಾನ ಸಿಟಿ ಮಂದಿಯಿಂದ ಬಿಬಿಎಂಪಿ ಬಜೆಟ್ ಗೆ ಬರೋಬ್ಬರಿ 4೦ಸಾವಿರಕ್ಕೂ ಅಧಿಕ ಸಲಹೆ ಪತ್ರಗಳು ಬಂದಿವೆ. ರಸ್ತೆ, ಕಸ, ಇ ಖಾತ, ತೆರಿಗೆ ವಿನಾಯಿತಿ(Tax Exemption) ಸೇರಿದಂತೆ ಹಲವು ಸಲಹೆಗಳನ್ನು ನೀಡಲಾಗಿದೆ. ಬಿಬಿಎಂಪಿಯು ಬಜೆಟ್ ಘೋಷಣೆಗೆ ಪೂರ್ವ ತಯಾರಿ ಮಾಡಿಕೊಳ್ಳುತ್ತಿದ್ದು, ಸಮಗ್ರ ಅಭಿವೃದ್ಧಿಗೆ ಸಾರ್ವಜನಿಕರಿಂದ ಸಲಹೆ ಪಡೆಯುತ್ತಿದೆ.
ಸಿಲಿಕಾನ್ ಮಂದಿಯಿಂದ ಪಾಲಿಕೆಗೆ ಬಂದಿರೋ ಪ್ರಮುಖ ಸಲಹೆಗಳನ್ನು ನೋಡುವುದಾದರೆ…
- ಗುಂಡಿ ಮುಕ್ತ ಬೆಂಗಳೂರು ಮಾಡುವಂತೆ ಸಲಹೆ
- ಆಸ್ತಿ ತೆರಿಗೆ ವಿನಾಯಿತಿ ಮತ್ತು ದಂಡ ಕ್ಯಾನ್ಸಲ್ ಗೆ ಸಲಹೆ
- ರಸ್ತೆ ಅಭಿವೃದ್ಧಿಗೆ ಸಲಹೆ
- ರಾಜಕಾಲುವೆ ದುರಸ್ತಿ
- ಕೆರೆ, ರಾಜಕಾಲುವೆ ಒತ್ತುವರಿ ತೆರವು
- ಬಿಬಿಎಂಪಿ ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರ ತಡೆಯುವಂತೆ ಸಲಹೆ
- ಇ ಖಾತೆ ಹೆಸರಿನಲ್ಲಿ ಲಕ್ಷಾಂತರ ಹಣ ವಸೂಲಿಯ ಆರೋಪ
- ಪುಟ್ ಪಾಥ್ ಗಳನ್ನು ಸರಿ ಮಾಡಿಸುವಂತೆ ಸಲಹೆ
- ಕಸ, ತ್ಯಾಜ್ಯ ವಿಲೇವಾರಿ ಸರಿಯಾಗುತ್ತಿಲ್ಲ
- ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು
- ನಗರದಲ್ಲಿ ಟ್ರಾಫಿಕ್ ಸಮಸ್ಯೆ ಕಂಟ್ರೋಲ್ ಮಾಡಿ
- ನಮ್ಮ ಕ್ಲಿನಿಕ್ ಗಳಲ್ಲಿ ಔಷಧಿ ವೈದ್ಯರ ಕೊರತೆ
- ಕೆಲ ಇಂದಿರಾ ಕ್ಯಾಂಟೀನ್ ಗಳಲ್ಲಿ ಸರಿಯಾದ ಊಟ ಕೊಡುವಂತೆ ಮನವಿ
- ನಗರದ ಹೊರ ವಲಯಗಳಲ್ಲಿ ಅನಧಿಕೃತ ಕಟ್ಟಡಗಳು ಕಟ್ಟುತ್ತಿದ್ದರೆ, ಫುಲ್ ಸ್ಟಾಪ್ ಹಾಕುವಂತೆ ಮನವಿ
- ಕಟ್ಟಡದ ಪ್ಲಾನ್ ಮಾಡಿಸಲು ಹೋದರೆ ನಿಮ್ಮ ಇಂಜಿನಿಯರಗಳು ಲಕ್ಷ, ಲಕ್ಷ ಹಣ ಕೇಳ್ತಾರೆಂದು ಆರೋಪ.