ಮಧ್ಯಪ್ರದೇಶ : ಬೈಕ್ನಲ್ಲಿ ಬಂದ ಇಬ್ಬರು ಯುವಕರು ಬಜರಂಗದಳ ನಾಯಕ ನಿಲೇಶ್ ಅಲಿಯಾಸ್ ನೀಲು ರಜಕ್ನನ್ನು ಹಾಡಹಗಲೇ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಇದೀಗ ಆರೋಪಿಗಳನ್ನು ಪೋಲಿಸರು ಗುರುತಿಸಿದ್ದು, ಒರ್ವ ಆರೋಪಿಯ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ಹತ್ಯೆಗೈದ ಘಟನೆ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಆರೋಪಿಗಳನ್ನು ಗುರುತಿಸಿದ್ದಾರೆ. ಅವರನ್ನು ಬಂಧಿಸಲು ಪೋಲಿಸರು ಹುಡುಕಾಟದಲ್ಲಿದ್ದಾರೆ.
ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಬ್ಯಾಂಕ್ ಆಫ್ ಬರೋಡಾ ಮುಂದೆ ಈ ಕೊಲೆ ಸಂಭವಿಸಿದೆ. ಮೋಟಾರ್ ಸೈಕಲ್‌ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಬಜರಂಗದಳ ನಾಯಕ ಮತ್ತು ಮಾಜಿ ಗೋ ಸೇವಾ ಪ್ರಮುಖ್ ನೀಲೇಶ್ ಅಲಿಯಾಸ್ ನೀಲು ರಜಕ್ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸರು ತಕ್ಷಣ ನೀಲೇಶ್ ರಜಕ್ ಅವರನ್ನು ವಿಜಯರಾಘವ್‌ಗಡ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.
ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಿದ್ದಾರೆ. ಪ್ರಮುಖ ಆರೋಪಿಗಳಾದ ಪ್ರಿನ್ಸ್ ಜೋಸೆಫ್ ಮತ್ತು ಅಕ್ರಮ್ ಅವರ ಮನೆಗಳ ಮೇಲೆ ದಾಳಿ ನಡೆಸಲಾಯಿತು, ಆದರೆ ಇಬ್ಬರೂ ತಲೆಮರೆಸಿಕೊಂಡಿದ್ದಾರೆ ಎಂದು ವಿಜಯರಾಘವಗಢ ಎಸ್‌ಡಿಒಪಿ ವೀರೇಂದ್ರ ಧರ್ವೆ ಹೇಳಿದ್ದಾರೆ.
ಕಟ್ನಿ ಪೊಲೀಸ್ ವರಿಷ್ಠಾಧಿಕಾರಿ ಅಭಿನಯ್ ವಿಶ್ವಕರ್ಮ ಅವರು ಮಾತನಾಡಿ, “ಆರೋಪಿಗಳನ್ನು ಗುರುತಿಸಲಾಗಿದೆ. ಆರೋಪಿಗಳಲ್ಲಿ ನೆಲ್ಸನ್ ಜೋಸೆಫ್ (30) ಮತ್ತು ಅಕ್ರಮ್ ಖಾನ್ (33) ಸೇರಿದ್ದಾರೆ. ಇಬ್ಬರೂ ಪ್ರಸ್ತುತ ಪರಾರಿಯಾಗಿದ್ದಾರೆ. ಕೊಲೆ ಆರೋಪಿ ಜೋಸೆಫ್ ತಂದೆ ಪೊಲೀಸ್ ದಾಳಿಗೂ ಮುನ್ನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಮಹಿಳಾ ಕ್ರಿಕೆಟ್ ರ‍್ಯಾಂಕಿಂಗ್ : ಮಂಧಾನಾ ಅಧಿಪತ್ಯ, ಆಸೀಸ್ ಆಲ್‌ರೌಂಡರ್‌ಗಳ ಪ್ರಾಬಲ್ಯ



















