ಬೆಂಗಳೂರು: ಸಚಿವ ರಾಜಣ್ಣ ಪುತ್ರ ರಾಜೇಂದ್ರ (Rajendra Rajanna) ಹತ್ಯೆಗೆ ಯತ್ನಿಸಿರುವ ಆರೋಪದ ಪ್ರಕರಣ ರಾಜ್ಯ ರಾಜಕೀಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಮಧ್ಯೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಕ್ಯಾತಸಂದ್ರ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಎಂಎಲ್ಸಿ ರಾಜೇಂದ್ರ ಅವರು ಆರೋಪ ಮಾಡಿದ ಹಾಗೆ 18 ನಿಮಿಷಗಳ ಆಡಿಯೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಡಿಯೋದಲ್ಲಿ (Audio) ಇಬ್ಬರ ಮಾತಿನ ಸಂಭಾಷಣೆ ಇದೆ ಎನ್ನಲಾಗಿದೆ.
ರಾಜೇಂದ್ರ ಅವರು ಈಗಾಗಲೇ ಸೋಮ ಮತ್ತು ಭರತ್ ಎಂಬುವವರು ವಿರುದ್ಧ ಹತ್ಯೆ ಯತ್ನದ ಆರೋಪ ಮಾಡಿದ್ದಾರೆ. ಆಡಿಯೋವನ್ನು ಎಫ್ಎಸ್ಎಲ್ಗೆ ಕಳುಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಎಂಎಲ್ಸಿ ರಾಜೇಂದ್ರ ಅವರು ಆರೋಪ ಮಾಡಿದ ಹಾಗೆ 18 ನಿಮಿಷಗಳ ಆಡಿಯೋವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಎಂಎಲ್ಸಿ ರಾಜೇಂದ್ರ ರಾಜಣ್ಣ ಅವರು, ತನ್ನ ಕೊಲೆಗೆ 70 ಲಕ್ಷ ರೂ.ಗೆ ಸುಪಾರಿ ಕೊಡಲಾಗಿದೆ ಎಂದು ಆರೋಪಿಸಿ ತುಮಕೂರು ಎಸ್ಪಿಗೆ ದೂರು ಸಲ್ಲಿಸಿದ್ದರು. 18 ನಿಮಿಗಳ ಆಡಿಯೋ ಸಾಕ್ಷ್ಯದ ಸಹಿತ ಎರಡು ಪುಟಗಳ ದೂರು ಸಲ್ಲಿಕೆ ಮಾಡಿದ್ದರು.