ಹುಕ್ಕಾ(hookah) ಮತ್ತು ವಿದೇಶಿ ಸಿಗರೇಟ್(cigarette) ಗೋದಾಮಿನ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ನಡೆದಿದೆ. ದಾಳಿ ವೇಳೆ ಲಕ್ಷಾಂತರ ರೂ. ಮೌಲ್ಯದ ವಸ್ತುಗಳನ್ನು ಸೀಜ್ ಮಾಡಲಾಗಿದೆ.
ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ವ್ಯಕ್ತಿಯನ್ನು ಬಂಧಿಸಲಾಗಿದೆ. ರಾಜ್ಯದಲ್ಲಿ ಹುಕ್ಕಾ ಬ್ಯಾನ್ ಮಾಡಲಾಗಿದೆ. ಆದರೂ ಹುಕ್ಕಾ ಉತ್ಪನ್ನಗಳನ್ನು ಸೇಲ್ ಮಾಡಲಾಗುತ್ತಿದೆ. ಜೊತೆಗೆ ಭಾರತದಲ್ಲಿ ಬ್ಯಾನ್ ಆಗಿರುವ ವಿದೇಶಿ ಸಿಗರೇಟ್ ಗಳನ್ನು ದಾಸ್ತಾನು ಮಾಡಿಕೊಳ್ಳಲಾಗಿದೆ. ಹೀಗಾಗಿ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೆ.ಆರ್. ಮಾರುಕಟ್ಟೆ ಪೊಲೀಸ್ ಠಾಣಾ(police station) ವ್ಯಾಪ್ತಿಯ ನಗರತ್ ಪೇಟೆಯ ಹೈಟೆಕ್ ಟ್ರೇಡ್ ಲಿಂಕ್ ಅಂಗಡಿ ಮೇಲೆಯೇ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ವೇಳೆ ಗೋದಾಮಿನಲ್ಲಿ ಸುಮಾರು 25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸೀಜ್ ಮಾಡಲಾಗಿದೆ. ಹುಕ್ಕಾ ಪಾಟ್, ಹುಕ್ಕಾ ಫ್ಲೇವರ್, ವಿದೇಶಿ ಸಿಗರೇಟ್ ಅಕ್ರಮವಾಗಿ ಸಂಗ್ರಹಿಸಲಾಗಿತ್ತು.
MRP ರೇಟ್ ಇಲ್ಲದೆಯೇ ವಿದೇಶಿಯ ಸಿಗರೇಟ್ ಗಳನ್ನು ಆರೋಪಿಗಳು ತರಿಸಿಕೊಂಡು ಮಾರಾಟ ಮಾಡುತ್ತಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಗೋದಾಮಿನ ಮಾಲೀಕ ಪ್ರವೀಣ ತಲೆ ಮರೆಸಿಕೊಂಡಿದ್ದಾನೆ. ಆತನ ಸಹೋದರ ವಿಶಾನ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಕುರಿತು ತನಿಖೆ ನಡೆಸುತ್ತಿದ್ದಾರೆ.