ಏಷನ್ಯ ಹಾಕಿ ಮಹಿಳಾ ಟೂರ್ನಿಯಲ್ಲಿ ಭಾರತೀಯ ತಂಡ ಭರ್ಜರಿ ಪ್ರದರ್ಶನ ನಡೆಸುತ್ತಿದೆ.
ಹಾಲಿ ಚಾಂಪಿಯನ್ ಭಾರತ ತಂಡ ಥಾಯ್ಲೆಂಡ್ ವಿರುದ್ಧ 13-0 ಅಂತರದಿಂದ ಭರ್ಜರಿ ಜಯ ಸಾಧಿಸಿದೆ. ಯುವ ಸ್ಟ್ರೈಕರ್ ದೀಪಿಕಾ 5 ಗೋಲು ಬಾರಿಸ ಪರಿಣಾಮ ಭಾರತ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಭಾರತ ತಂಡ ಸೆಮಿಫೈನಲ್ ಪ್ರವೇಶ ಮಾಡುವುದು ಖಚಿತವಾಗಿದೆ.
ವಿರೋಧಿ ಆಟಗಾರರಿಗೆ ಬಾರತ ತಂಡ ಗೋಲು ಬಾರಿಸಲು ಅವಕಾಶವನ್ನೇ ನೀಡಲಿಲ್ಲ. 3ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದ ದೀಪಿಕಾ ಆ ಬಳಿಕ 19, 43, 45, 45 ನಿಮಿಷಗಳಲ್ಲಿ ಗೋಲು ಬಾರಿಸಿದರು. ಪ್ರೀತಿ ದುಬೆ (9ನೇ ನಿ., 40ನೇ ನಿ.), ಲಾಲ್ರೆಮ್ಸಿಯಾಮಿ (12ನೇ ನಿ., 56ನೇ ನಿ.), ಮನೀಶಾ ಚೌಹಾಣ್ (55ನೇ ನಿ., 58ನೇ ನಿ.) ತಲಾ 2 ಗೋಲು ಬಾರಿಸಿದರು. ಬ್ಯುಟಿ ಡುಂಗ್ ಡುಂಗ್ (30ನೇ ನಿ.) ಹಾಗೂ ನವ್‌ನೀತ್ ಕೌರ್ (53ನೇ ನಿ.) ತಲಾ 1 ಗೋಲು ಗಳಿಸಿದರು. ಈ ಮೂಲಕ ಆತ್ಮವಿಶ್ವಾಸದಲ್ಲಿರುವ ಭಾರತ ಹಾಕಿ ತಂಡ ಮುಂದಿನ ಪಂದ್ಯದಲ್ಲಿ ಚೀನಾ ವಿರುದ್ಧ ಸೆಣಸಾಟ ನಡೆಸಲಿದೆ.