ಟಿ20 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅಮೆರಿಕದ ವಿರುದ್ಧ ಉತ್ತಮ ಬೌಲಿಂಗ್ ಮಾಡಿ ದಾಖಲೆ ಬರೆದಿದ್ದಾರೆ.
ಅರ್ಷದೀಪ್ ಪಾಕ್ ವಿರುದ್ಧ ಕೂಡ ಉತ್ತಮ ಬೌಲಿಂಗ್ ಮಾಡಿದ್ದರು. ಅಮೆರಿಕದ ಆರಂಭಿಕ ಆಟಗಾರ ಜಹಾಂಗೀರ್ ಅವರನ್ನು ಮೊದಲ ಎಸೆತದಲ್ಲಿಯೇ ಅರ್ಷದೀಪ್ ಬಲಿ ಪಡೆದಿದ್ದಾರೆ. ಈ ವಿಕೆಟ್‌ನೊಂದಿಗೆ ಅರ್ಷದೀಪ್ ಸಿಂಗ್ ಟಿ20 ಅಂತರಾಷ್ಟ್ರೀಯ ಪಂದ್ಯದ ಮೊದಲ ಎಸೆತದಲ್ಲಿಯೇ ವಿಕೆಟ್ ಪಡೆದ ಭಾರತದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಬರೆದಿದ್ದಾರೆ.
2022 ರ ಟಿ20 ವಿಶ್ವಕಪ್ನಲ್ಲಿ ಭುವನೇಶ್ವರ್ ಕುಮಾರ್ ಮೊದಲ ಎಸೆತದಲ್ಲಿ ವಿಕೆಟ್ ಪಡೆದಿದ್ದರು. ಆದರೆ ಇದು ಪಂದ್ಯದ ಮೊದಲ ಎಸೆತವಾಗಿರಲಿಲ್ಲ. ಅದು ಪಂದ್ಯದ ಎರಡನೇ ಇನ್ನಿಂಗ್ಸ್ ನ ಮೊದಲ ಎಸೆತವಾಗಿತ್ತು.
ಮೊದಲ ಓವರ್‌ನಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಅರ್ಷದೀಪ್ ಸಿಂಗ್ ಮತ್ತೊಂದು ದಾಖಲೆ ಬರೆದಿದ್ದಾರೆ. ಟಿ20ಯಲ್ಲಿ ಪವರ್‌ಪ್ಲೇಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್ಗಳ ಪಟ್ಟಿಯಲ್ಲಿ ಇದೀಗ ಬುಮ್ರಾ ಹಿಂದಿಕ್ಕಿದ್ದಾರೆ. ಮೊದಲ ಸ್ಥಾನದಲ್ಲಿರುವ ಭುವನೇಶ್ವರ್ ಕುಮಾರ್ ಪವರ್‌ಪ್ಲೇನಲ್ಲಿ 47 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಅರ್ಶ್‌ದೀಪ್ ಸಿಂಗ್ ಪವರ್ ಪ್ಲೇನಲ್ಲಿ ಭುವನೇಶ್ವರ್ ಹಿಂದೆ ಇದ್ದಾರೆ. ಅರ್ಷದೀಪ್ ಬೌಲಿಂಗ್ ದಾಳಿಗೆ ಅಮೆರಿಕ ತತ್ತರಿಸಿದ್ದು, ನಿಗದಿತ ಓವರ್ ಗಳಲ್ಲಿ 110 ರನ್ ಗಳಿಸಿದೆ.
ಈ ರನ್ ಬೆನ್ನಟ್ಟಿದ ಭಾರತ ತಂಡ ಸೂರ್ಯ ಕುಮಾರ್ ಯಾದವ್ ಅವರ ತಾಳ್ಮೆಯ ಅರ್ಧ ಶತಕದ ಸಹಾಯದೊಂದಿಗೆ ಯಶಸ್ವಿಯಾಗಿ ಗುರಿ ತಲುಪಿತು. ಹ್ಯಾಟ್ರಿಕ್ ಗೆಲುವಿನ ಮೂಲಕ ಅಧಿಕೃತವಾಗಿ ಭಾರತ ತಂಡ ಮುಂದಿನ ಹಂತಕ್ಕೆ ತಲುಪಿಕೊಂಡಿದೆ.
