ಭಾರತದ ಅತಿ ದೊಡ್ಡ ಏರ್‌ಲೈನ್ ಇಂಡಿಗೋ ಮತ್ತೆ ದೊಡ್ಡ ವಿವಾದದ ಅಂಚಿನಲ್ಲಿದೆ. ಕಳೆದ ಕೆಲವು ವಾರಗಳಲ್ಲಿ ಸುಮಾರು 5,000ಕ್ಕೂ ಹೆಚ್ಚು ಫ್ಲೈಟ್‌ಗಳು ರದ್ದು, ಲಕ್ಷಾಂತರ ಪ್ರಯಾಣಿಕರು ಸಂಕಷ್ಟ… ಈಗ ಅಂತರ್‌ವಾಣಿಜ್ಯ ಆಯೋಗವಾದ CCI ಇಂಡಿಗೋ ವಿರುದ್ಧ ‘ಮಾರುಕಟ್ಟೆ ದುರುಪಯೋಗ’ ಆರೋಪಗಳ ಬಗ್ಗೆ ತನಿಖೆ ಆರಂಭಿಸುವ ಸಾಧ್ಯತೆ ಇದೆ. ಇತ್ತ ಪ್ರಯಾಣಿಕರ ಸಂಕಷ್ಟ ಇನ್ನೂ ಕಡಿಮೆಯಾಗಿಲ್ಲ. ರದ್ದಾದ ಫ್ಲೈಟ್‌ಗಳಿಂದ ವ್ಯವಹಾರ ನಷ್ಟ, ರಿಫಂಡ್ ತಡೆಗಳು, ಮತ್ತು ಟಿಕೆಟ್ ದರಗಳ ಅಸಹಜ ಏರಿಕೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದೊಂದು ವಾರದಿಂದ ಇಂಡಿಗೋದ ಸಾವಿರಾರು ವಿಮಾನಗಳ ಹಾರಾಟ ರದ್ದಾಗಿ ಲಕ್ಷಾಂತರ ಪ್ರಯಾಣಿಕರಿಗೆ ಸಮಸ್ಯೆಯಾಗಿತ್ತು. ಸದ್ಯ ಭಾರತೀಯ ವಿಮಾನಯಾನ ಮಾರುಕಟ್ಟೆಯ 65% ಹಂಚಿಕೆಯನ್ನು ಹೊಂದಿರುವ ಇಂಡಿಗೋ, ಹೊಸ ಪೈಲಟ್ ವಿಶ್ರಾಂತಿ ನೀತಿಗಳನ್ನು ಜಾರಿಗೆ ತರದೇ ಇದ್ದ ಕಾರಣ ಸಿಬ್ಬಂದಿ ಬಿಕ್ಕಟ್ಟು ತೀವ್ರಗೊಂಡಿತು. ಬಹಳಷ್ಟು ವಿಮಾನಗಳು ಏಕಕಾಲದಲ್ಲಿ ಗ್ರೌಂಡ್‌ನಲ್ಲೆ ನಿಂತಿದ್ದು, ಹೊಸ ಪೈಲಟ್‌ಗಳ ಟ್ರೈನಿಂಗ್ ಶೇಡ್ಯೂಲ್ ಹಿಂಬಿದ್ದಿರುವುದು, ರೋಸ್ಟರ್ ಮ್ಯಾನೇಜ್ಮೆಂಟ್‌ನಲ್ಲಿ ಲೋಪ—ಇವುಗಳ ಸಂಯೋಜನೆಯೇ ಈ 5,000 ವಿಮಾನಗಳ ರದ್ದಾಗುವಿಕೆಗೆ ಕಾರಣವಾಗಿದೆ..
ಇಂಡಿಗೋ ಎದುರಿಸುತ್ತಿರುವ ಸಂಕಷ್ಟದ ಪ್ರಮುಖ ಕಾರಣ.. ಹೊಸದಾಗಿ ಬಂದ ಆಯಾಸ ನಿರ್ವಹಣಾ ನಿಯಮದಿಂದ.. ಇದು ಸಮಯಕ್ಕೆ ಸರಿಯಾಗಿ ಜಾರಿಗೆ ತರದೆ ಇರುವುದು.ಈ ನಿಯಮಗಳು ಪೈಲಟ್‌ಗಳಿಗೆ ಹೆಚ್ಚು ವಿಶ್ರಾಂತಿ, ರಾತ್ರಿ ಅವಧಿಯಲ್ಲಿ ಕಡಿಮೆ ಫ್ಲೈಟ್‌ಗಳು, ಹಾಗೂ ವಾರದ ಫೀಟ್ ಅವರ್ ಮಿತಿಯನ್ನು ಕಡ್ಡಾಯಗೊಳಿಸುದನ್ನ ಜಾರಿಗೆ ತಂದಿದೆ.. ಆದರೆ ಇಂಡಿಗೋ ಈ ಮಾರ್ಪಾಡುಗಳಿಗೆ ಅಗತ್ಯವಿರುವಷ್ಟು ಹೆಚ್ಚುವರಿ ಪೈಲಟ್‌ನ್ನ ನೇಮಿಸದೇ, ಹಳೆಯ ವೇಳಾಪಟ್ಟಿಯನ್ನು ಮುಂದುವರಿಸಿರುವುದೇ ಗಂಭೀರ ಸಮಸ್ಯೆಯಾಗಿದೆ..
ಇಂಡಿಗೋ ಎದುರಿಸುತ್ತಿರುವ ಸಿಬ್ಬಂದಿ ಬಿಕ್ಕಟ್ಟು ಮತ್ತು 5,000 ವಿಮಾನ ರದ್ದುಗೊಳಿಕೆಗೆ ಈಗ ಅಂತರ್‌ವಾಣಿಜ್ಯ ಆಯೋಗ ಗಮನ ಹರಿಸುತ್ತಿದೆ. CCI ಇತ್ತೀಚೆಗೆ ತಲುಪಿರುವ ದೂರುಗಳ ಪರಿಶೀಲನೆ ಆರಂಭಿಸಿದ್ದು, ಇಂಡಿಗೋ ತನ್ನ ಮಾರುಕಟ್ಟೆ ಹಂಚಿಕೆಯನ್ನು ದುರುಪಯೋಗಪಡಿಸಿರುವ ಸಾಧ್ಯತೆಗಳ ಬಗ್ಗೆ ತೀವ್ರವಾಗಿ ಪರಿಶೀಲಿಸುತ್ತಿದೆ. ಪೈಲಟ್‌ಗಳ ವಿಶ್ರಾಂತಿ ನಿಯಮ ಜಾರಿಗೆ ತರುವಲ್ಲಿ ವಿಫಲತೆ, ಸಿಬ್ಬಂದಿ ಕೊರತೆ, ಪ್ರಯಾಣಿಕರ ಅಸಮಾಧಾನ ಈ ಎಲ್ಲದನ್ನೂ ಗಮನದಲ್ಲಿಟ್ಟುಕೊಂಡು ಈಗ ಅಂತರ್‌ವಾಣಿಜ್ಯ ಆಯೋಗ CCIಯೂ ಇಂಡಿಗೋಗೆ ಮತ್ತೊಂದು ತಲೆನೋವುಕೊಡಲು ಬರ್ತಾ ಇದೆ..
ಇಂಡಿಗೋ ಹೇಳುವಂತೆ ಸಿಬ್ಬಂದಿ ಕೊರತೆಯ ಕಾರಣದಿಂದ ವಿಮಾನ ಕಾರ್ಯಾಚರಣೆ ಮೇಲೆ ಪರಿಣಾಮ ಬಿದ್ದಿದೆ. ಪ್ರಯಾಣಿಕರ ಸುರಕ್ಷತೆ ಸಂಸ್ಥೆಯ ಮೊದಲ ಆದ್ಯತೆ ಮೊದಲ ಆದ್ಯತೆ. ಪರಿಸ್ಥಿತಿ ಸಾಮಾನ್ಯಕ್ಕೆ ಬರಲು ಕೆಲಸ ಮಾಡುತ್ತಿದ್ದೇವೆ.ಸದ್ಯ ಫ್ಲೈಟ್ ಕ್ಯಾನ್ಸೆಲ್ ಮತ್ತು ಡಿಲೇ ಕುರಿತು ರಿಫಂಡ್ ಮತ್ತು ರಿಬುಕಿಂಗ್ ಪ್ರಕ್ರಿಯೆ ಮಾಡುತ್ತಿದ್ದೇವೆ ಎಂದಿದೆ.. ಇಂಡಿಗೋ ವಿಮಾನ ರದ್ದುಗೊಳಿಕೆ ಮತ್ತು ಸಿಬ್ಬಂದಿ ಬಿಕ್ಕಟ್ಟಿನ ನೇರ ಹೊಡೆತವು ದೇಶದಾದ್ಯಂತ ಸಾವಿರಾರು ಪ್ರಯಾಣಿಕರ ಮೇಲೆ ಬಿದ್ದಿದೆ. ರದ್ದಾಗಿದ ವಿಮಾನಗಳ ಸಂಖ್ಯೆಯ ಹೆಚ್ಚಳದಿಂದ, ಅದೇ ಮಾರ್ಗಗಳಲ್ಲಿ ಬೇರೆಯ ಏರ್‌ಲೈನ್‌ಗಳ ಟಿಕೆಟ್ ದರಗಳು 2ರಿಂದ 3 ಪಟ್ಟು ಏರಿಕೆಯಾದವು. ಮೊದಲು ಪ್ರಯಾಣಕ್ಕಾಗಿ 5,000–8,000 ರೂಪಾಯಿಗೆ ಸಿಗುತ್ತಿದ್ದ ಟಿಕೆಟ್‌ಗಳು ಈಗ 15,000–22,000 ರೂಪಾಯಿ ದಾಟಿವೆ.. ವಿಮಾನ ನಿಲ್ದಾಣಗಳಲ್ಲಿ ಮಾಹಿತಿ ನಿರ್ವಹಣೆಯ ಕೊರತೆ. ಇನ್ನೂ ರದ್ದಾದ ವಿಮಾನಗಳ ಬಗ್ಗೆ ಸರಿಯಾದ ಮಾಹಿತಿ ನೀಡದ ಇಂಡಿಗೋ
ಈ ಎಲ್ಲವೂ ಪ್ರಯಾಣಿಕರಲ್ಲಿ ಗೊಂದಲ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಎರಡು ದಿನಗಳಲ್ಲಿ ಕೆಲ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ಕಿಡಿಕಾರಿರುವ ಘಟನೆಯಂತೂ ಪ್ರಪಂಚದ ಮೂಲೆಮೂಲೆಗೂ ವೈರಲ್ ಆಗ್ತಾ ಇದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ನಿಲ್ಲದ ರೋಡ್ ರೇಜ್ | BMTC ಚಾಲಕ, ಕಂಡಕ್ಟರ್ ಮೇಲೆ ಹಲ್ಲೆ ಮಾಡಿದ ಕ್ಯಾಬ್ ಡ್ರೈವರ್!



















