ಢಾಕಾ: ಬಾಂಗ್ಲಾದಲ್ಲಿ ಧಾರ್ಮಿಕ ಹಿಂಸಾಚಾರ ಹೆಚ್ಚಾಗಿದೆ. ಢಾಕಾದ ಹೊರವಲಯದಲ್ಲಿ ಮತ್ತೊಂದು ಹಿಂದೂ ದೇವಾಲಯಕ್ಕೆ ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ.
ಢಾಕಾದ ಧೋರ್ ಗ್ರಾಮದಲ್ಲಿರುವ ಮಹಾಭಾಗ್ಯ ಲಕ್ಷ್ಮೀನಾರಾಯಣ ಮಂದಿರದ ಮೇಲೆ ದಾಳಿ ನಡೆದಿದೆ. ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಅವರ ಪೂರ್ವಜರ ದೇವಸ್ಥಾನವನ್ನು ಸುಟ್ಟು ಹಾಕಿರುವ ಬಗ್ಗೆ ದೂರು ದಾಖಲಿಸಲಾಗಿದೆ ಎಂದು ದೇವಸ್ಥಾನದ ಮೇಲ್ವಿಚಾರಕ ಬಾಬುಲ್ ಘೋಷ್ ಹೇಳಿದ್ದಾರೆ.
ಲಕ್ಷ್ಮೀನಾರಾಯಣ ದೇವಸ್ಥಾನ ನಮ್ಮ ಪೂರ್ವಜರ ದೇವಸ್ಥಾನ. ದಾಳಿಕೋರರು ಹಿಂಬದಿಯಿಂದ ಮನೆಯೊಳಗೆ ನುಗ್ಗಿ ವಿಗ್ರಹಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಸೀರೆ ಮತ್ತು ಧೋತಿಯನ್ನು ಧರಿಸಿದ್ದ ಲಕ್ಷ್ಮಿ ಮತ್ತು ನಾರಾಯಣನ ವಿಗ್ರಹಗಳು, ಅವುಗಳ ಹಿಂದಿದ್ದ ಪರದೆ ಎಲ್ಲಾ ಸುಟ್ಟು ಹೋಗಿದೆ ಎಂದು ಅವರು ಹೇಳಿದ್ದಾರೆ.