ಬೆಂಗಳೂರು : ಬೆಂಗಳೂರಿನ ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್ ಸಿಹಿಸುದ್ದಿ ಕೊಟ್ಟಿದ್ದು, ನಗರದ ಬಹುನಿರೀಕ್ಷಿತ ಮಾರ್ಗವಾದ ಪಿಂಕ್‌ಲೈನ್‌ನಲ್ಲಿ ರೈಲು ಓಡಾಟದ ಟ್ರಯಲ್ ಆರಂಭಿಸಿದೆ.
ಇದು ಒಟ್ಟು 21.26ಕಿ.ಮೀ ಉದ್ದದ ಮಾರ್ಗವಾಗಿದ್ದು, ಇದರಲ್ಲಿ 7.5 ಕಿ.ಮೀ ಎಲಿವೇಟೆಡ್ ಮಾರ್ಗದಲ್ಲಿ ಟ್ರಯಲ್ ಆರಂಭಿಸಿದೆ. 6 ಸ್ಟೇಷನ್ ಇರುವ ಈ ಮಾರ್ಗದಲ್ಲಿ ಮೆಟ್ರೋ ರೈಲು ಕಾಳೇನಾ ಅಗ್ರಹಾರದಿಂದ ತಾವರೆಕೆರೆವರೆಗೆ ಚಲಿಸುತ್ತದೆ.
ಇನ್ನೂ ಏಪ್ರಿಲ್, ಮೇನಲ್ಲಿ ಮೊದಲ ಹಂತದ ಮಾರ್ಗ ಓಪನ್ ಮಾಡುವ ತಯಾರಿಯನ್ನು ಬಿಎಂಆರ್‌ಸಿಎಲ್ ಮಾಡತ್ತಿದ್ದು, ಸದ್ಯ ಉಳಿದ 13.76 ಕಿ.ಮೀ ಅಂಡರ್ ಗ್ರೌಂಡ್ ಕಾಮಗಾರಿ ನಡೆಯುತ್ತಿದೆ. ಮುಕ್ತಾಯದ ಬಳಿಕ ಪೂರ್ತಿ ಮಾರ್ಗ ಆರಂಭವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ : ಬೆಂಗಳೂರಿನಲ್ಲಿ ಮಹಿಳಾ ಆಯೋಗಗಳ ಸಹಯೋಗದಲ್ಲಿ ‘POSH ಕಾಯ್ದೆ’ ಜಾಗೃತಿ ಕಾರ್ಯಾಗಾರ



















