ದೆಹಲಿ: ಟಿ-20 ಏಷ್ಯಾ ಕಪ್ 2025ರ ಪಂದ್ಯಾವಳಿಯಲ್ಲಿ ಪಾಕಿಸ್ತಾನ ಮೇಲಿನ ಗೆಲುವನ್ನು ರಕ್ಷಣಾ ಪಡೆಗಳು ಮತ್ತು ಪಹಲ್ಗಾಮ್ ಸಂತ್ರಸ್ತರಿಗೆ ಅರ್ಪಿಸಿದ್ದ ಭಾರತ ಟಿ-20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಧೈರ್ಯವಿದ್ದರೆ ನಿಮ್ಮ ಪಂದ್ಯದ ಎಲ್ಲಾ ಗಳಿಕೆಯನ್ನು ಸೇನೆಗೆ ನೀಡಿ ಎಂದು ಸವಾಲ್ ಹಾಕಿದ್ದ ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಸೌರಭ್ ಭಾರದ್ವಾಜ್ ವಿರುದ್ಧ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ತೀವ್ರವಾಗಿ ಟೀಕಿಸಿದ್ದಾರೆ.
ಭಾರದ್ವಾಜ್ ಅವರ ಸವಾಲಿಗೆ ಸೂರ್ಯಕುಮಾರ್ ಯಾದವ್ ಉತ್ತಮ ಶೈಲಿಯಲ್ಲೇ ಪ್ರತಿಕ್ರಿಯಿಸಿದ್ದಾರೆ ಎಂದು ಸೂರ್ಯಮಾರ್ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಅಮಿತ್ ಮಾಳವೀಯ ಪೋಸ್ಟ್ ಮಾಡಿಕೊಂಡಿದ್ದಾರೆ.
ಸೆಪ್ಟೆಂಬರ್ 21ರ ಪಾಕ್ ವಿರುದ್ಧ ಪಂದ್ಯ ಗೆದ್ದ ಬಳಿಕ ಭಾರತದ ತಂಡದ ನಾಯಕ ಸೂರ್ಯಕುಮಾರ್ ಪಾಕಿಸ್ತಾನ ಮೇಲಿನ ಗೆಲುವನ್ನು ಪಹಲ್ಗಾಮ್ ಸಂತ್ರಸ್ತರಿಗೆ ಅರ್ಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೇ ವೇಳೆ ಪಹಲ್ಗಾಮ್ ಸಂತ್ರಸ್ತರಿಗೆ ತಮ್ಮ ಏಷ್ಯಾ ಕಪ್ ಸಂಭಾವನೆಯನ್ನು ದಾನ ಮಾಡುವಂತೆ, ಸೌರಭ್ ಭಾರದ್ವಾಜ್ ಅವರು ಸೂರ್ಯಕುಮಾರ್ ಯಾದವ್ ಅವರಿಗೆ ಸವಾಲು ಕೂಡ ಹಾಕಿದ್ದರು. ಇದಕ್ಕೆ ಪ್ರತಿಕಿಯಿಸಿದ ಸೂರ್ಯಕುಮಾರ್ ಯಾದವ್ ಸೋಮವಾರ ಏಷ್ಯಾಕಪ್‌ನ ಸಂಪೂರ್ಣ ಪಂದ್ಯ ಶುಲ್ಕವನ್ನು ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸಂತ್ರಸ್ತರಿಗೆ ಮತ್ತು ಭಾರತೀಯ ಸಶಸ್ತ್ರ ಪಡೆಗಳಿಗೆ ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.
ಸೂರ್ಯಕುಮಾರ್ ಶುಲ್ಕವನ್ನು ದಾನ ಮಾಡಲು ನಿರ್ಧರಿಸಿದ ನಂತರ , ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ಈ ಕುರಿತು ಕುಹಕವಾಡಿದ್ದು, ಸೂರ್ಯ ಕುಮಾರ್‌ಗೆ ಬಹಿರಂಗ ಸವಾಲ್ ಹಾಕಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕ ಸೌರಭ್ ಭಾರದ್ವಾಜ್ ವಿಡಿಯೋದಲ್ಲಿ, ಭಾರದ್ವಾಜ್ ಪಹಲ್ಗಾಮ್ ಸಂತ್ರಸ್ತರಿಗೆ ತಮ್ಮ ದುಡಿಮೆಯ ಸಂಪೂರ್ಣ ಹಣವನ್ನು ನೀಡಲು ಸೂರ್ಯಕುಮಾರ್ ಯಾದವ್ ಅವರಿಗೆ ಹೇಳಿದ್ದಾರೆ.
ʻಸೂರ್ಯಕುಮಾರ್ ಯಾದವ್, ನಿಮಗೆ ಸಾಮರ್ಥ್ಯವಿದ್ದರೆ, ನೀವು ಸಂಪಾದಿಸಿದ ಹಣವನ್ನು ಪಹಲ್ಗಾಮ್ ಸಂತ್ರಸ್ತರ ವಿಧವೆಯರಿಗೆ ನೀಡಿ ಎಂದು ನಾವು ನಿಮಗೆ ಸವಾಲು ಹಾಕುತ್ತೇವೆʼ ಎಂದು ಭಾರದ್ವಾಜ್ ವಿಡಿಯೋದಲ್ಲಿ ಹೇಳುತ್ತಿರುವುದು ನೋಡಬಹುದು.
ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಆಪ್ ನಾಯಕನಿಗೆ ತಿರುಗೇಟು ನೀಡಿರುವ ಅಮಿತ್ ಮಾಳವೀಯ ಎರಡು ಪೈಸೆಯ ಎಎಪಿ ಶಾಸಕ, ಅರವಿಂದ್ ಕೇಜ್ರಿವಾಲ್ ಹಾಗೂ ಅವರ ಜೋಕರ್, ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುಟುಂಬಸ್ಥರ ಬೆಂಬಲಕ್ಕಾಗಿ ಸಶಸ್ತ್ರ ಪಡೆಗಳಿಗೆ ತನ್ನ ಪಂದ್ಯದ ಶುಲ್ಕವನ್ನು ದೇಣಿಗೆ ನೀಡುವಂತೆ ಟೀಮ್ ಇಂಡಿಯಾ ನಾಯಕನಿಗೆ ಸವಾಲು ಹಾಕಿದ್ದರು, ನಮ್ಮ ನಾಯಕ ಉತ್ತಮ ಶೈಲಿಯಲ್ಲೇ ಪ್ರತಿಕ್ರಿಯಿಸಿದ್ದಾರೆಂದು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್ನು ಮುಂದುವರಿದ ಅವರು ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಅದ್ಭುತ ಜಯ ಸಾಧಿಸಿದ ನಂತರ ಕಾಂಗ್ರೆಸ್ ಮೌನವಾಗಿದ್ದು ಪಾಕಿಸ್ತಾನ, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಒಂದೇ ಭಾಗದಲ್ಲಿವೆ ಎಂದು ಬಿಜೆಇ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಕಿಡಿಕಾರಿದ್ದಾರೆ.
ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಗೆದ್ದ ನಂತರ ಇಡೀ ಕಾಂಗ್ರೆಸ್ ಅನ್ನು ಕೋಮಾ ಸ್ಥಿತಿಯಲ್ಲಿಟ್ಟಂತೆ ಕಾಣುತ್ತಿದೆ.
ಅಲ್ಲದೆ ಆಪರೇಷನ್ ಸಿಂಧೂರ ನಂತರ , ಭಾರತೀಯ ಸೇನೆಯ ಅದ್ಭುತ ದಾಳಿಗಳಿಗೆ ಅಭಿನಂದನೆ ಸಲ್ಲಿಸಲು ಕಾಂಗ್ರೆಸ್‌ಗೆ ಸಾಧ್ಯವಾಗದಿದ್ದಾಗ, ಕಾಂಗ್ರೆಸ್, ಭಾರತೀಯ ಕ್ರಿಕೆಟ್ ತಂಡದ ಯಶಸ್ಸನ್ನು ಆಚರಿಸಲು ದೇಶದೊಂದಿಗೆ ಸೇರುವ ಮೊದಲು ಮೊಹ್ಸಿನ್ ನಖ್ವಿ ಮತ್ತು ಪಾಕಿಸ್ತಾನದಲ್ಲಿರುವ ಅವರ ಇತರ ನಿರ್ವಾಹಕರಿಂದ ಅನುಮತಿಗಾಗಿ ಕಾಯುತ್ತಿರುವಂತೆ ತೋರುತ್ತಿದೆ ಎಂದು ಟೀಕೆ ಮಾಡಿದ್ರು.
ಮುಂದುವರಿದು ಮಾತನಾಡಿದ ಅವರು ಇದನ್ನು ಬದಿಗಿಡಿ ಸಂಪೂರ್ಣ ಟೂರ್ನಮೆಂಟ್‌ನಲ್ಲಿ ಪಾಕಿಸ್ತಾನವನ್ನು ಮೂರು ಬಾರಿ ಸೋಲಿಸಿ ಏಷ್ಯಾಕಪ್ ಗೆದ್ದ ನಮ್ಮ ರಾಷ್ಟ್ರೀಯ ತಂಡವನ್ನು ಅಭಿನಂದಿಸುವ ಕಾಂಗ್ರೆಸ್‌ನಿಂದ ಒಂದೇ ಒಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಕೂಡ ಇಲ್ಲವೆಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕಾಂಗ್ರೆಸ್ ವಿರುದ್ಧ ತೀವ್ರವಾಗಿ ಟೀಕಿಸಿದ್ದಾರೆ.