ನ್ಯೂಯಾರ್ಕ್: ರಷ್ಯಾ ಹಾಗೂ ಉಕ್ರೇನ್ (Russia- Ukraine) ಮಧ್ಯೆ ಇನ್ನೂ ಯುದ್ಧ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ರಷ್ಯಾದಿಂದ ಉಕ್ರೇನ್ ಮೇಲೆ ಕ್ಷಿಪಣಿ ದಾಳಿ ನಡೆಸಲಾಗುತ್ತಿದೆ. ಹೀಗಾಗಿ ಉಕ್ರೇನ್ ಗೆ ಮದ್ದು ಗುಂಡುಗಳ ತೀವ್ರ ಕೊರತೆ ಎದುರಾಗಿದೆ. ಇದರ ಮಧ್ಯೆ ಉಕ್ರೇನ್‌ಗೆ ಸಹಾಯ ಮಾಡಲು ಅಮೆರಿಕ ಮುಂದೆ ಬಂದಿದೆ.
ಈಗ ಮುಂದುವರೆದಿರುವ ಯುದ್ಧದ ಮಧ್ಯೆ ತೆರಳಲು ಅಮೆರಿಕ ಮುಂದಾಗಿದೆ. ಉಕ್ರೇನ್‌ಗೆ ಬೆಂಬಲವನ್ನು ನೀಡಲು ಅಮೆರಿಕ ತಯಾರಿ ನಡೆಸುತ್ತಿದೆ. ಅಮೆರಿಕ ಈಗ ಉಕ್ರೇನ್‌ಗೆ 275 ಮಿಲಿಯನ್ ಡಾಲರ್‌ಗಳ ಮಿಲಿಟರಿ ನೆರವು ಪ್ಯಾಕೇಜ್ ನೀಡಲು ಮುಂದಾಗಿದೆ. ಅಲ್ಲದೇ, 155 ಎಂಎಂ ಫಿರಂಗಿ ಶೆಲ್‌ಗಳು, ನಿಖರವಾದ ವಾಯು ಯುದ್ಧಸಾಮಗ್ರಿಗಳು ಮತ್ತು ವಾಹನಗಳನ್ನು ಕೂಡ ಅಮೆರಿಕ ನೀಡಲು ಮುಂದಾಗಿದೆ.
ರಷ್ಯಾದ ಭೂ ದಾಳಿಯ ನಂತರ ಈಶಾನ್ಯ ಉಕ್ರೇನ್‌ನಲ್ಲಿ ಸಾವಿರಾರು ಜನ ನಾಗರಿಕರು ದೇಶ ತೊರೆದಿದ್ದಾರೆ. ರಷ್ಯಾದ ಸೇನೆಯು ಗಡಿಯ ಬಹುಭಾಗದ ಮೇಲೆ ಹಿಡಿತ ಸಾಧಿಸಿದೆ. ಆದರೂ ಉಕ್ರೇನ್ ರಷ್ಯಾದ ವಿರುದ್ಧ ಹೋರಾಟ ನಡೆಸುತ್ತಿದೆ.