ಬೆಂಗಳೂರು: ಶ್ರೀಕೃಷ್ಣ ಆರ್ಟ್ಸ್ & ಕ್ರಿಯೇಷನ್ಸ್ ಲಾಂಛನದಲ್ಲಿ ಅಜೇಯ್ ರಾವ್ ನಿರ್ಮಿಸಿ, ನಾಯಕನಾಗಿ ನಟಿಸಿರುವ “ಯುದ್ಧಕಾಂಡ” ಚಿತ್ರ ಕಳೆದ ಏಪ್ರಿಲ್ 18 ರಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ಚಿತ್ರ ನೋಡಿದವರು ಮೆಚ್ಚುಗೆಯ ಮಹಾಪೂರವನ್ನೇ ಹರಸುತ್ತಿದ್ದಾರೆ. ಹೀಗಾಗಿ ಈ ಸಂತಸವನ್ನು ಅಜೇಯ್ ರಾವ್ ಹಾಗೂ ಚಿತ್ರತಂಡದವರು ಸಕ್ಸಸ್ ಮೀಟ್ ನಲ್ಲಿ ಹಂಚಿಕೊಂಡರು.

ನಮ್ಮ ಚಿತ್ರವನ್ನು ಇಲ್ಲಿಯವರೆಗೂ ನೋಡಿರುವ ಒಬ್ಬ ಪ್ರೇಕ್ಷಕರಿಂದ ಸಹ ನಮ್ಮ ಚಿತ್ರದ ಬಗ್ಗೆ ನೆಗೆಟಿವ್ ಮಾತು ಬಂದಿಲ್ಲ. ಎಲ್ಲರೂ ಶೇ. 100ರಷ್ಟು ಮೆಚ್ಚಿಕೊಂಡಿದ್ದಾರೆ. ಪ್ರೇಕ್ಷಕರು ನನ್ನ ಚಿತ್ರದ ಬಗ್ಗೆ ಆಡಿರುವ ಪಾಸಿಟಿವ್ ಮಾತುಗಳೇ ನನಗೆ ಇಂದು ಎನರ್ಜಿಯಾಗಿದೆ. ಈ ಚಿತ್ರ ಜನರ ಮನಸ್ಸಿಗೆ ಬಹಳ ಹತ್ತಿರವಾಗಿದೆ ಅಂತ ಹೇಳಬಹುದು. ಅಜೇಯ್ ರಾವ್ ಇಂತಹ ಚಿತ್ರ ಮಾಡಿದ್ದ ಅಂತ ನಾನು ಹೋದ ಮೇಲು ನೆನಪಿಸಿಕೊಳ್ಳುವ ಚಿತ್ರ “ಯುದ್ದಕಾಂಡ” ವಾಗಿದೆ ಎಂದು ನಟ ಅಜಯ್ ರಾವ್ ಹೇಳಿದ್ದಾರೆ.
ರಕ್ಷಿತಾ ಹಾಗೂ ಪ್ರೇಮ್ ಅವರು ಸಹ ಕರೆ ಮಾಡಿ ವಿಚಾರಿಸಿದ್ದಾರೆ. ನೆನಪಿರಲಿ ಪ್ರೇಮ್, ಓಂಪ್ರಕಾಶ್ ರಾವ್ ಮುಂತಾದವರು ಚಿತ್ರ ನೋಡಿ ವಿಡಿಯೋ ಸಂದೇಶದ ಮೂಲಕ ಹಾರೈಸಿದ್ದಾರೆ ಎಂದಿದ್ದಾರೆ.
ಈ ಸಿನಿಮಾ ನೋಡಿದ ನಂತರ ನನ್ನ ಹೆಂಡತಿ ಭಾವುಕರಾಗಿ ಚಿತ್ರಮಂದಿರದಿಂದಲೇ ನನಗೆ ಕರೆ ಮಾಡಿ ಪ್ರಶಂಸೆ ನೀಡಿದರು. ಮನೆಗೆ ಬಂದ ಮೇಲೆ ನಿಮ್ಮ ಪಾತ್ರ ತುಂಬಾ ಚೆನ್ನಾಗಿದೆ. ಮುಂದೆ ಈತರಹದ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳಿ ಎಂದು ಸಲಹೆ ಕೂಡ ನೀಡಿದರು. ಒಂದೊಳ್ಳೆ ಚಿತ್ರ ಮಾಡಿ ನಿರ್ಮಾಪಕರು ಹಾಗೂ ನಿರ್ದೇಶಕರು ಗೆದಿದ್ದಾರೆ. ಚಿತ್ರದ ಗೆಲುವಿಗೆ ಎಲ್ಲಕ್ಕಿಂತ ಮೌತ್ ಪಬ್ಲಿಸಿಟಿ ಬಹು ಮುಖ್ಯ. ಹಾಗಾಗಿ ಚಿತ್ರ ನೋಡಿದವರು ಹೆಚ್ಚಿನ ಜನರಿಗೆ ಈ ಚಿತ್ರದ ಬಗ್ಗೆ ಹೇಳಿ ಎಂದರು ನಟ ಪ್ರಕಾಶ್ ಬೆಳವಾಡಿ.
ನಟಿ ಅರ್ಚನಾ ಜೋಯಿಸ್ ಕೂಡ ತಮ್ಮ ಪಾತ್ರ ಹಾಗೂ ಚಿತ್ರಕ್ಕೆ ಸಿಗುತ್ತಿರುವ ಪ್ರಶಂಸೆಗೆ ಸಂತಸ ವ್ಯಕ್ತ ಪಡಿಸಿದರು. ಬೇಬಿ Radnya, ಛಾಯಾಗ್ರಾಹಕ ಕಾರ್ತಿಕ್ ಶರ್ಮ, ಸಂಗೀತ ನಿರ್ದೇಶಕ ಹೇಮಂತ್ ಜೋಯಿಸ್ ಹಾಗೂ ಕಲಾ ನಿರ್ದೇಶಕ ಅಮರ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿದ್ದರು.