ಬೆಂಗಳೂರು: ಇಲ್ಲಿಯ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ ಸರಣಿ ಅಪಘಾತ ಸಂಭವಿಸಿದೆ.
ಎರಡು ಬಸ್, ಟ್ಯಾಕ್ಟರ್, ಬೈಕ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಬಸ್ ಗಳು ಜಖಂ ಆಗಿದ್ದು, ಬೈಕ್ ಸವಾರ ಗಾಯಗೊಂಡಿದ್ದಾರೆ. ಸ್ಥಳಕ್ಕೆ HSR ಲೇಔಟ್ ಸಂಚಾರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಹನಗಳನ್ನು ತೆರವುಗೊಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಎಲಿವೇಟೆಡ್ ಫ್ಲೈ ಓವರ್ ಬಂದ್ ಮಾಡಲು ಸೂಚನೆ ನೀಡಲಾಗಿದ್ದು, ಹೊಸೂರು ಕಡೆ ಹೋಗುವರು ಫ್ಲೈ ಓವರ್ ಕೆಳಗಡೆ ಹೋಗಲು ಸೂಚನೆ ನೀಡಲಾಗಿದೆ.