ಬೆಂಗಳೂರು: ನಿಮ್ಮ ಆಧಾರ್ ಕಾರ್ಡ್ ನಲ್ಲಿ ಹೆಸರು, ವಿಳಾಸ, ಹುಟ್ಟಿದ ದಿನಾಂಕ ಅಥವಾ ಇತರ ವೈಯಕ್ತಿಕ ವಿವರಗಳನ್ನು ಬದಲಾಯಿಸಲು ಅಥವಾ ಅಪ್ ಡೇಟ್ ಮಾಡಲು ಯೋಚಿಸುತ್ತಿದ್ದೀರಾ? ಹಾಗಾದರೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಬಿಡುಗಡೆ ಮಾಡಿರುವ ಹೊಸ ಮಾರ್ಗಸೂಚಿ ಮತ್ತು ಮಾನ್ಯ ದಾಖಲೆಗಳ ಪಟ್ಟಿಯನ್ನು ಪರಿಶೀಲಿಸುವುದು ಅತ್ಯಗತ್ಯ. ಆಧಾರ್ ನಲ್ಲಿ ಯಾವುದೇ ತಿದ್ದುಪಡಿ ಮಾಡಲು ಯುಐಡಿಎಐ ನಿರ್ದಿಷ್ಟ ದಾಖಲೆಗಳನ್ನು ಮಾತ್ರ ಮಾನ್ಯ ಮಾಡುತ್ತದೆ.
ವಿವರಗಳ ಬದಲಾವಣೆಗೆ ತಕ್ಕಂತೆ ದಾಖಲೆಗಳು ಬದಲಾಗುತ್ತವೆ. ಕೆಲವು ದಾಖಲೆಗಳು ಗುರುತಿನ ಪುರಾವೆಯಾಗಿ ಕೆಲಸ ಮಾಡಿದರೆ, ಇನ್ನು ಕೆಲವು ವಿಳಾಸ ಅಥವಾ ಹುಟ್ಟಿದ ದಿನಾಂಕದ ಪುರಾವೆಯಾಗಿ ಬಳಕೆಯಾಗುತ್ತವೆ. ಯುಐಡಿಎಐ ಅಧಿಕೃತವಾಗಿ ಸ್ವೀಕರಿಸುವ ಪ್ರಮುಖ ದಾಖಲೆಗಳ ಪಟ್ಟಿ ಇಲ್ಲಿದೆ
- ಗುರುತಿನ ಪುರಾವೆ
- ಹೆಸರು ಬದಲಾವಣೆ ಅಥವಾ ಗುರುತು ಖಚಿತಪಡಿಸಲು ಅರ್ಜಿದಾರರ ಫೋಟೋ ಇರುವ ದಾಖಲೆ ಅಗತ್ಯ.
- ಭಾರತೀಯ ಪಾಸ್ ಪೋರ್ಟ್, ರೇಷನ್ ಕಾರ್ಡ್ ಅಥವಾ ಪಿಡಿಎಸ್ ಫೋಟೋ ಕಾರ್ಡ್.
- ಮತದಾರರ ಗುರುತಿನ ಚೀಟಿ ಅಥವಾ ಡ್ರೈವಿಂಗ್ ಲೈಸೆನ್ಸ್.
- ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ನೀಡಲಾದ ಫೋಟೋ ಐಡಿ ಕಾರ್ಡ್.
- ಪಿಂಚಣಿದಾರರ ಫೋಟೋ ಐಡಿ ಕಾರ್ಡ್ ಅಥವಾ ಸ್ವಾತಂತ್ರ್ಯ ಹೋರಾಟಗಾರರ ಕಾರ್ಡ್.
- ನರೇಗಾ (ವಿಬಿ ಜಿ ರಾಮ್ ಜಿ) ಜಾಬ್ ಕಾರ್ಡ್.
- ಮದುವೆ ಅಥವಾ ವಿಚ್ಛೇದನ ಆದೇಶ, ಜಾತಿ ಪ್ರಮಾಣಪತ್ರ ಮತ್ತು ಗೆಜೆಟ್ ಅಧಿಸೂಚನೆ.
- ಮಾನ್ಯತೆ ಪಡೆದ ಶಿಕ್ಷಣ ಮಂಡಳಿ ಅಥವಾ ವಿಶ್ವವಿದ್ಯಾಲಯ ನೀಡಿದ ಅಂಕಪಟ್ಟಿ.
- ವಿಳಾಸದ ಬದಲಾವಣೆ
- ಪಾಸ್ ಪೋರ್ಟ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಅಥವಾ ಕಿಸಾನ್ ಪಾಸ್ ಬುಕ್.
- ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್ ಉಳಿತಾಯ ಖಾತೆ ಪಾಸ್ ಬುಕ್.
- ಮೂರು ತಿಂಗಳಿಗಿಂತ ಹಳೆಯದಾದ ವಿದ್ಯುತ್, ನೀರು, ಗ್ಯಾಸ್ ಅಥವಾ ಬ್ರಾಡ್ ಬ್ಯಾಂಡ್ ಬಿಲ್.
- ಒಂದು ವರ್ಷದೊಳಿನ ಆಸ್ತಿ ತೆರಿಗೆ ರಶೀದಿ.
- ನೋಂದಾಯಿತ ಮಾರಾಟ ಒಪ್ಪಂದ ಅಥವಾ ಬಾಡಿಗೆ ಒಪ್ಪಂದ.
- ಸರ್ಕಾರದ ಅಥವಾ ಸಾರ್ವಜನಿಕ ವಲಯದ ಉದ್ಯಮಗಳ ವಸತಿ ಹಂಚಿಕೆ ಪತ್ರ.
- ಹುಟ್ಟಿದ ದಿನಾಂಕ ಬದಲಾವಣೆ
- ಜನನ ಪ್ರಮಾಣಪತ್ರ
- ಪಾಸ್ ಪೋರ್ಟ್ ಅಥವಾ ಸರ್ಕಾರದ ಅಧಿಕೃತ ಸಂಸ್ಥೆಗಳು ನೀಡಿದ ಸೇವಾ ಫೋಟೋ ಐಡಿ ಕಾರ್ಡ್.
- ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಂದ ನೀಡಲಾದ ಅಂಕಪತ್ರ ಅಥವಾ ಪ್ರಮಾಣಪತ್ರ.
- ಪಿಂಚಣಿದಾರರ ಫೋಟೋ ಗುರುತಿನ ಚೀಟಿ.
ಗಮನಿಸಿ
ಆಧಾರ್ ನಲ್ಲಿ ಯಾವುದೇ ತಿದ್ದುಪಡಿಗಳನ್ನು ಮಾಡುವ ಮುನ್ನ ಸಾರ್ವಜನಿಕರು ಯುಐಡಿಎಐನ ಅಧಿಕೃತ ವೆಬ್ ಸೈಟ್ ಭೇಟಿ ನೀಡಿ ಸರಿಯಾದ ಮತ್ತು ನವೀಕರಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.
ಇದನ್ನೂ ಓದಿ:ಸಹಕಾರ ಸಂಘದಲ್ಲಿ 10 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ: ಈ ಜಿಲ್ಲೆಯವರಿಗೆ ಗುಡ್ ನ್ಯೂಸ್



















