ಅದೃಷ್ಟದ ಬಾಗಿಲು ಎನ್ನುವುದು ಯಾರ ಪಾಲಿಗೆ ಎಲ್ಲಿ ಹೇಗೆ ತೆರೆಯುತ್ತೆ? ಅಂತಾ ಊಹಿಸುವುದಕ್ಕೂ ಆಗುವುದಿಲ್ಲ. ಇಂಥದ್ದೇ ಒಂದು ಲಕ್ಕಿ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಇಲ್ಲಿನ ಕೌಶಾಂಬಿ ಜಿಲ್ಲೆಯ ಯುವಕನೋರ್ವ ಕೇವಲ 39 ರೂಪಾಯಿ ಹೂಡಿಕೆ ಮಾಡಿ ಬರೋಬ್ಬರಿ 4 ಕೋಟಿ ಬಾಚಿಕೊಂಡಿದ್ದಾನೆ. ಡ್ರೀಮ್ 11 ನಲ್ಲಿ ಯುವಕ ಮಂಗಲ್ ಸರೋಜ್ 4 ಕೋಟಿ ರೂ. ಜಾಕ್ ಪಾಟ್ ಹೊಡೆದಿದ್ದಾನೆ.
ಚೆನ್ನೈ-ಪಂಜಾಬ್ ನಡುವಿನ ಪಂದ್ಯದಲ್ಲಿ ಮಂಗಲ್ 39 ರೂಪಾಯಿ ಹೂಡಿಕೆ ಮಾಡಿದ್ದ. ಅವನಿಗೆ ಈಗ 4 ಕೋಟಿಯ ಬಂಪರ್ ಬಹುಮಾನ ಬಂದಿದೆ. ಐಪಿಎಲ್ ಆರಂಭದಿಂದಲೂ ಡ್ರೀಮ್ 11 ನಲ್ಲಿ ಹಣಹಾಕಿದ್ದೆ. ಒಂದೇ ಒಂದು ರೂಪಾಯಿ ಬಂದಿರಲಿಲ್ಲ. ಆದರೆ, ಪಂಜಾಬ್ -ಚೆನ್ನೈ ನಡುವಿನ ಪಂದ್ಯ ನನ್ನ ಬದುಕಿನ ದಿಕ್ಕನ್ನೇ ಬದಸಲಿಸಿದೆ. ಬಂದ ಹಣದಲ್ಲಿ ಉತ್ತಮ ವ್ಯಾಪಾರ ಮಾಡ್ತೀನಿ ಅಂತಾ ಮಂಗಲ್ ಹೇಳಿದ್ದಾನೆ.



















