
ಚೆನ್ನೈ: ದಕ್ಷಿಣ ಆಫ್ರಿಕಾ (South Africa) ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ನಲ್ಲಿಯೇ ಭಾರತೀಯ ಮಹಿಳಾ ಆಟಗಾರ್ತಿಯರು (Team India) 3 ವಿಶ್ವದಾಖಲೆ (World Record) ಬರೆದಿದ್ದಾರೆ.
ಓಪನರ್ ಶಫಾಲಿ ವರ್ಮಾ (Shafali Verma) ವೇಗದ ದ್ವಿಶತಕ ಸಿಡಿಸಿದರೆ, ಏಕದಿನ ಸ್ಟೈಲ್ ನಲ್ಲಿ ಬ್ಯಾಟ್ ಬೀಸಿದ ಶಫಾಲಿ ವರ್ಮಾ ಕೇವಲ 194 ಎಸೆತಗಳಲ್ಲಿ ದ್ವಿಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಅವರು 2024ರಲ್ಲೇ ಆಫ್ರಿಕಾ ವಿರುದ್ಧ 248 ಎಸೆತಗಳಲ್ಲಿ 200 ರನ್ ಸಿಡಿಸಿದ ಸಾಧನೆ ಮಾಡಿದ್ದರು. ಸದ್ಯ ಈ ದಾಖಲೆಯನ್ನು ಶಫಾಲಿ ಮುರಿದಿದ್ದಾರೆ.
ಭಾರತೀಯ ತಂಡದ ಆರಂಭಿಕ ಆಟಗಾರರಾದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧನಾ (Smriti Mandhana ) ಅವರ ಮೊದಲ ವಿಕೆಟ್ ಗೆ 312 ಎಸೆತಗಳಲ್ಲಿ 292 ಜೊತೆಯಾಟವಾಡಿ ವಿಶ್ವದಾಖಲೆ ಬರೆದಿದ್ದಾರೆ. ಈ ಹಿಂದೆ 2004ರಲ್ಲಿ ಪಾಕಿಸ್ತಾನದ ಕಿರಣ್ ಬಲೂಚ್ ಮತ್ತು ಸಜಿದಾ ಜೋಡಿ ವಿಂಡೀಸ್ ವಿರುದ್ಧ ಮೊದಲ ವಿಕೆಟಿಗೆ 241 ರನ್ ಗಳಿಸಿದ್ದು, ದಾಖಲೆಯಾಗಿತ್ತು. ಈಗ ಭಾರತೀಯ ಆಟಗಾರ್ತಿಯರು ಈ ದಾಖಲೆ ಮುರಿದಿದ್ದಾರೆ.

ಟೀಂ ಇಂಡಿಯಾ ಆಟಗಾರ್ತಿಯರ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದಿಂದ 98 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 525 ರನ್ ಗಳಿಸಿದೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸಲ್ಲಿ ಮೊದಲ ದಿನ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಕೂಡ ಭಾರತದ ಪಾಲಾಗಿದೆ. ಶಫಾಲಿ ವರ್ಮಾ 205, ಸ್ಮೃತಿ ಮಂಧಾನ 149, ಜೆಮಿಮಾ ಜೆಮಿಮಾ ರಾಡ್ರಿಗಸ್ 55 ರನ್ (94 ಎಸೆತ, 8 ಬೌಂಡರಿ) ಹೊಡೆದು ವಿಕೆಟ್ ಒಪ್ಪಿಸಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ ಔಟಾಗದೇ 42 ರನ್(76 ಎಸೆತ, 2 ಬೌಂಡರಿ), ರಿಚಾ ಘೋಷ್ ಔಟಾಗದೇ 43 ರನ್(33 ಎಸೆತ, 9 ಬೌಂಡರಿ) ಗಳಿಸಿದ್ದಾರೆ.
