ಬೆಂಗಳೂರು: ಮಣ್ಣು ಡಂಪ್ ಮಾಡುವಾಗ ಲಾರಿ ಹಳ್ಳಕ್ಕೆ ಬಿದ್ದಿರುವ ಘಟನೆ ದೇವನಹಳ್ಳಿ ತಾಲೂಕಿನ ಸಾದಹಳ್ಳಿ ಗ್ರಾಮದಲ್ಲಿರೋ ಬಂಡೆ ಹಳ್ಳದಲ್ಲಿ ನಡೆದಿದೆ.

ಗಣಿಗಾರಿಕೆಗೆ ದಾರಿ ಮಾಡಿಕೊಡಲು ಬಂಡೆ ಹಳ್ಳಕ್ಕೆ ಮಣ್ಣು ಸುರಿದು, ಲಾರಿಗಳ ಮೂಲಕ ಮಣ್ಣು ತುಂಬಿಸುವ ಕಾರ್ಯ ಮಾಡಲಾಗುತ್ತಿತ್ತು. ಈ ವೇಳೆ 100 ಅಡಿ ಹಾಳಕ್ಕೆ ಲಾರಿ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಹಳ್ಳಕ್ಕೆ ಬಿದ್ದರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸ್ಥಳೀಯರು ಜೆಸಿಬಿಯಿಂದ ಗುಂಡಿಗೆ ಬಿದ್ದಿದ್ದ ಲಾರಿ ಮೇಲೆತ್ತುವ ಕಾರ್ಯ ಮಾಡಿದ್ದಾರೆ.