ಕಲಬುರಗಿ: ಅಯೋಧ್ಯೆ ಹತ್ತಿರ ಭೀಕರ ಅಪಘಾತ ನಡೆದ ಪರಿಣಾಮ ಕರ್ನಾಟಕ ಮೂಲದ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಲಾರಿ ಹಾಗೂ ಟಿಟಿ ವಾಹನದ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದರ ಪರಿಣಾಮ ಕಲಬುರಗಿ ಮೂಲದ ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೇ, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಶಿವರಾಜ್, ಕಾಶಿನಾಥ್ ಹಾಗೂ ತಂಗೆಮ್ಮ ಸಾವನ್ನಪ್ಪಿದವರು ಎನ್ನಲಾಗಿದೆ.
ಒಂದೇ ಕುಟುಂಬದ 22 ಜನ ಕಾಶಿ ವಿಶ್ವನಾಥನ ದರ್ಶನ ಮುಗಿಸಿ ಅಯೋಧ್ಯೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಗಾಯಗೊಂಡವರು ಸ್ಥಳೀಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.