ಬೆಂಗಳೂರು: ನಗರದಲ್ಲೊಬ್ಬ ಆಧುನಿಕ ರಾಬಿನ್ ಹುಡ್ ಪತ್ತೆಯಾಗಿದ್ದು, ಕಳ್ಳತನ ಮಾಡಿ 20 ಮಕ್ಕಳ ಶಾಲಾ, ಕಾಲೇಜ್ ಫೀಸ್ ಕಟ್ಟಿದ್ದಾನೆ ಎನ್ನಲಾಗಿದೆ.
ಬೇಗೂರು ನಿವಾಸಿ ಶಿವು @ ಶಿವರಪ್ಪನ್ ಆರೋಪಿ ಎನ್ನಲಾಗಿದೆ. ಬಂಧಿತ ಶಿವುಗೆ ಹೆಂಡತಿ, ಮಕ್ಕಳಿಲ್ಲ. ಹೀಗಾಗಿ ಆತ್ಮಹತ್ಯೆಗೆ ಯತ್ನಿಸಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ತಾನಿದ್ದ ಪ್ರದೇಶದಲ್ಲಿ ಶಾಲಾ-ಕಾಲೇಜು ಫೀಸ್ ಕಟ್ಟಲು ಪರದಾಡುತ್ತಿರುವುದನ್ನು ಕಂಡು ಅವರಿಗೆ ಸಹಾಯ ಮಾಡಲು ಕಳ್ಳತನದ ಹಾದಿ ಹಿಡಿದಿದ್ದಾನೆ.
ಬ್ಯಾಡರಹಳ್ಳಿ ಸೇರಿದಂತೆ ಹಲವೆಡೆ ಮನೆಗಳಿಗೆ ಕನ್ನ ಹಾಕಿದ್ದಾನೆ. ಕದ್ದ ಚಿನ್ನಾಭರಣವನ್ನು ಸ್ನೇಹಿತರಾದ ಅನಿಲ್@ ಜಗ್ಗ ಮತ್ತು ವಿವೇಕನ ಸಹಾಯದಿಂದ ಮಾರಾಟ ಮಾಡಿದ್ದಾನೆ. ಹೀಗೆ ಕದ್ದ ಚಿನ್ನಾಭರಣವನ್ನು ತಮಿಳುನಾಡಿನಲ್ಲಿ 22 ಲಕ್ಷ ರೂ.ಗೆ ಮಾರಾಟ ಮಾಡಿಸಿದ್ದಾನೆ. ಬಂದ ಹಣದಲ್ಲಿ ವಿವೇಕನಿಗೆ 4 ಲಕ್ಷ ರೂ,, ಅನಿಲ್ ಗೆ 4 ಲಕ್ಷ ರೂ. ನೀಡಿ ಆಟೋ ಕೊಡಿಸಿದ್ದಾನೆ. ಇನ್ನುಳಿದ 14 ಲಕ್ಷ ರೂ.ನಲ್ಲಿ 20 ಮಕ್ಕಳಿಗೆ ಶಾಲಾ ಹಾಗೂ ಕಾಲೇಜು ಫೀಸ್ ಕಟ್ಟಿದ್ದಾನೆ.
ಸದ್ಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ಯಾಡರಹಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಶಿವು, ಅನಿಲ್ ಹಾಗೂ ವಿವೇಕ್ ಬಂಧಿಸಿ 24 ಲಕ್ಷ ರೂ. ಮೌಲ್ಯದ 260 ಗ್ರಾಂ ಚಿನ್ನದ ಗಟ್ಟಿ ಸೀಜ್ ಮಾಡಲಾಗಿದೆ.