ಭಾರತವೇ ಹೆಮ್ಮೆ ಪಡುವಂತಹ ವಿಚಾರವೊಂದು ಮಧ್ಯಪ್ರದೇಶದಿಂದ ಹೊರ ಬಿದ್ದಿದೆ. ಅದರಲ್ಲೂ ಚಿನ್ನ ಪ್ರಿಯರಂತೂ ಹಬ್ಬ ಆಚರಿಸುವಂತಿದೆ.
ಇಲ್ಲಿನ ಸಿಂಗ್ರೌಲಿಯ ಚಿತರಂಗಿಯಲ್ಲಿ ದೊಡ್ಡ ಮಟ್ಟದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಬರೋಬ್ಬರಿ 23.60 ಹೆಕ್ಟೇರ್ ಪ್ರದೇಶದಲ್ಲಿ ವ್ಯಾಪಿಸಿರುವ ಚಿನ್ನದ ನಿಕ್ಷೇಪ ನಿಜಕ್ಕೂ ಭಾರತದ ಪಾಲಿಗೆ ಅಪರೂಪದ ನಿಧಿಯಾಗಿ ಪರಿಣಮಿಸುತ್ತಿದೆ.
ಭಾರತೀಯ ಪುರಾತತ್ವ ಇಲಾಖೆ ಮತ್ತು ಗಣಿ ಇಲಾಖೆ ಜಂಟಿಯಾಗಿ ನಡೆಸಿದ್ದ ಶೋಧದಲ್ಲಿ ಈ ನಿಕ್ಷೇಪ ಪತ್ತೆಯಾಗಿದ್ದು, ಭವಿಷ್ಯದಲ್ಲಿ ವಾರ್ಷಿಕ 250 ಕೋಟಿ ರೂ.ಗಳ ಆದಾಯವನ್ನು ನಿರೀಕ್ಷಿಸಬಹುದಾಗಿದೆ. ಇಲ್ಲಿನ ಗಣಿಗಳಲ್ಲಿ ಲಭ್ಯವಿರುವ ಸಂಪತ್ತು ಪ್ರತಿ 1 ಟನ್ ಗೆ ಒಂದರಿಂದ ಒಂದೂವರೆ ಗ್ರಾಂ ಬಂಗಾರವನ್ನು ನೀಡುಬಲ್ಲದು ಅಂತಾ ಅಂದಾಜಿಸಲಾಗಿದೆ.
ಅಷ್ಟೇ ಅಲ್ಲಾ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೂ ಈ ಗಣಿ ಬಾಗಿಲು ತೆರೆದಂತಾಗಿದೆ. ಮಧ್ಯ ಪ್ರದೇಶ ಸರ್ಕಾರ ಈಗಾಗಲೇ ವರದಿಯನ್ನು ಪರಿಶೀಲಿಸಿದ್ದು, ಶೀಘ್ರವೇ ಚಿನ್ನವನ್ನು ಹೊರಕತೆಗೆಯುವ ಕಾರ್ಯಕ್ಕೆ ಮುನ್ನುಡಿ ಬರೆಯಲಿದೆ.