ಹುಬ್ಬಳ್ಳಿ: ಮಹಿಳೆಯರೊಂದಿಗೆ ಅಸಭ್ಯ ವರ್ತನೆ ತೋರುತ್ತಿದ್ದ ಕಾಮುಕನಿಗೆ ನಡುರಸ್ತೆಯಲ್ಲೇ ಸಾರ್ವಜನಿಕರು ಧರ್ಮದೇಟು ನೀಡಿರುವ ಘಟನೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ನಡೆದಿದೆ.
ಈ ಕಾಮುಕ ಪ್ರತಿನಿತ್ಯ ಒಂದಲ್ಲ ಒಂದು ರೂಪದಲ್ಲಿ ಈಶ್ವರ ನಗರದ ಮಹಿಳೆಯರಿಗೆ ತೊಂದರೆ ಕೊಡುತ್ತಿದ್ದ. ಇದರಿಂದ ಮಹಿಳೆಯರು ಹೊರಬರುಲು ಹೆದರುವಂತಾಗಿತ್ತು. ಈತಾನ ಕಾಟಕ್ಕೆ ಬೇಸತ್ತ ಜನರು ಕಾನೂನು ಕೈಗೆತ್ತಿಕೊಂಡು ಕಾಮುಕನನ್ನು ಕಂಬಕ್ಕೆ ಕಟ್ಟಿ, ಚಪ್ಪಲಿ ಸೇವೆ ಜೊತೆಗೆ ಮನಬಂದಂತ್ತೆ ಥಳಿಸಿ, ಇತನ ಕೃತ್ಯಕ್ಕೆ ತಕ್ಕ ಶಾಸ್ತಿ ಮಾಡಿದ್ದಾರೆ. ಸದ್ಯ ಈ ಘಟನಾ ಸಂಬಂಧ ಹುಬ್ಬಳ್ಳಿ ಕಸಬಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಹೊಟ್ಟೆ ನೋವು ತಾಳಲಾರದೆ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ.. ಚಾ.ನಗರದಲ್ಲಿ ಮನಕಲಕುವ ಘಟನೆ!



















