ಇತ್ತೀಚೆಗೆ ಸಣ್ಣಪುಟ್ಟ ವಿಚಾರಕ್ಕೂ ದಂಪತಿ ಡಿವೋರ್ಸ್ ಪಡೆಯುವುದು ಸಾಮಾನ್ಯವಾಗಿದೆ. ಮದುವೆಯಾಗಿ ಹೊಂದಾಣಿಕೆಯಾಗದೆ ತಿಂಗಳು, ವರ್ಷಗಳಲ್ಲಿ ದಂಪತಿ ದೂರವಾಗುವುದನ್ನು ನೋಡಿದ್ದೇವೆ. ಇಲ್ಲಿ ದಂಪತಿ ಮದುವೆಯಾದ ಮೂರೇ ನಿಮಿಷದಲ್ಲಿ ವಿಚ್ಛೇತನ ಪಡೆದು ಸುದ್ದಿಯಾಗಿದ್ದಾರೆ.
ಈ ಪ್ರಕರಣ 2019 ರಲ್ಲಿ ನಡೆದರೂ ಈಗ ಚರ್ಚೆಗೆ ಬಂದಿದೆ. ಕುವೈತ್ ನ ದಂಪತಿಗಳು ಮದುವೆಯಾದ ಕೇವಲ 3 ನಿಮಿಷಗಳ ನಂತರ ಪರಸ್ಪರ ವಿಚ್ಛೇದನ ಪಡೆದಿದ್ದಾರೆ. ಆದರೂ ಡಿವೋರ್ಸ್ (divorce) ನೀಡಿದ ಯುವತಿಯನ್ನು ಎಲ್ಲರೂ ಶ್ಲಾಘಿಸುತ್ತಿದ್ದಾರೆ. ಮದುವೆಯೂ ಆಗಿದ್ದಾರೆ. ಮೂರೇ ನಿಮಿಷಕ್ಕೆ ವಿಚ್ಛೇದನವನ್ನೂ ಪಡೆದಿದ್ದಾರೆ. ಆದರೂ ಮಹಿಳೆಯನ್ನು ಎಲ್ಲರೂ ಹೋಗಳುತ್ತಿರುವುದೇಕೆ? ಎಂದು ನಿಮಗೆ ಗೊಂದಲ ಮೂಡಬಹುದು.
ಅಸಲಿ ವಿಷಯ ಏನೆಂದರೆ, 2019 ರಲ್ಲಿ ಈ ದಂಪತಿ ಕೋರ್ಟ್ ಮ್ಯಾರೇಜ್ ಆಗಿದ್ದರು. ಮದುವೆಯ ನಂತರ ನ್ಯಾಯಾಲಯದಿಂದ ಹೊರಗೆ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ವಧು ಜಾರಿ ಬಿದ್ದಳು. ಅವಳು ಬಿದ್ದ ರೀತಿ ನೋಡಿ, ವರನು ಅವಳನ್ನು ಸ್ಟುಪಿಡ್ ಎಂದು ಕರೆದಿದ್ದಾನೆ. ಇದು ಹುಡುಗಿಗೆ ಇಷ್ಟವಾಗಿಲ್ಲ. ಕೂಡಲೇ ಅವಳು ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾಳೆ. ನ್ಯಾಯಾಧೀಶರು ಅದೇ ಸಮಯದಲ್ಲಿ ಡಿವೋರ್ಸ್ ನೀಡಿದ್ದಾರೆ. ಸದ್ಯ ಈ ಜೋಡಿ ಮದುವೆಯಾಗಿ 5 ವರ್ಷ ಕಳೆದಿವೆ. ಆದರೂ ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.