ಮುಂಬೈ : ಕಾನೂನು ಪ್ರಕಾರ ಗಂಡು ಮಕ್ಕಳು 21ನೇ ವಯಸ್ಸಿಗೆ ಮದುವೆಯಾಗಬಹುದು. ಆದರೆ ಇಲ್ಲೊಬ್ಬ 19 ವರ್ಷದ ಯುವಕ ಇನ್ನೆರಡು ವರ್ಷ ಕಾಯಬೇಕು ಎಂದ ಮನೆಯವರ ಮಾತಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ನವೆಂಬರ್ 30ರಂದು ಡೊಂಬಿವ್ಲಿ ಪ್ರದೇಶದಲ್ಲಿ ನಡೆದಿದೆ. ಜಾರ್ಖಂಡ್ ಮೂಲದ ಯುವಕ ತನ್ನ ಊರಿನ ಹುಡುಗಿಯನ್ನು ಪ್ರೀತಿಸುತ್ತಿದ್ದ ಮತ್ತು ಅವಳನ್ನು ಮದುವೆಯಾಗಲು ಬಯಸಿದ್ದ. ಆದರೆ ಆತನ ಕುಟುಂಬವು ಮದುವೆಗೆ ಕಾನೂನುಬದ್ಧವಾಗಿ ಅನುಮತಿಸಲಾದ 21 ವರ್ಷವನ್ನು ತಲುಪುವವರೆಗೆ ಕಾಯುವಂತೆ ಕೇಳಿಕೊಂಡಿತ್ತು. ಇದು ಅವನಿಗೆ ಭಾವನಾತ್ಮಕ ಯಾತನೆಯನ್ನು ಉಂಟು ಮಾಡಿತ್ತು ಎಂದು ಮನ್ಪಾಡಾ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಯುವಕ ತನ್ನ ಮನೆಯ ಛಾವಣಿಗೆ ಸ್ಕಾರ್ಫ್ ಕಟ್ಟಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ನೇಣು ಬಿಗಿದಿದ್ದನ್ನು ನೋಡಿದ ಕೂಡಲೇ ಕುಟುಂಬಸ್ಥರು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ಯುವಕ ಮೃತಪಟ್ಟಿದ್ದಾಗಿ ವೈದ್ಯರು ಘೋಷಿಸಿದರು.
ಇದನ್ನೂ ಓದಿ : ಮುಂದಿನ ಎರಡು ವಾರಗಳಲ್ಲಿ ರಸ್ತೆಗಿಳಿಯಲಿವೆ 4 ಹೊಸ ಎಸ್‌ಯುವಿಗಳು : ಮಾರುತಿ, ಟಾಟಾ ಮತ್ತು ಕಿಯಾ ಅಬ್ಬರ



















