ಪ್ಯಾರಿಸ್ ಒಲಿಂಪಿಕ್ಸ್ ನ ಬಹುತೇಕ ಮುಕ್ತಾಯವಾಗುವ ಹಂತಕ್ಕೆ ಬಂದು ನಿಂತಿದೆ. 15ನೇ ದಿನ ಭಾರತೀಯ ಸ್ಪರ್ಧಿಗಳು ಎರಡು ವಿಭಾಗಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಇಲ್ಲಿಯವರೆಗೆ 6 ಪದಕಗಳನ್ನು ಗೆದ್ದಿರುವ ಭಾರತ ಅಂತಿಮ ಕೊನೆಯ ದಿನಗಳಲ್ಲಿ ಈ ಪದಕಗಳ ಸಂಖ್ಯೆಯನ್ನು ಹೆಚ್ಚಿಸುವ ವಿಶ್ವಾಸದಲ್ಲಿದೆ.
ಈ ಬಾರಿಯ ಒಲಿಂಪಿಕ್ಸ್ ನಲ್ಲಿ ಭಾರತವು ಚಿನ್ನದ ಪದಕ ಎದುರು ನೋಡುತ್ತಿದೆ. ಈ ಬಾರಿ ಒಂದೇ ಒಂದು ಚಿನ್ನದ ಪದಕ ಭಾರತಕ್ಕೆ ಧಕ್ಕಿಲ್ಲ. ಹೀಗಾಗಿ ಕೊನೆಯ ದಿನವಾದರೂ ಭಾರತಕ್ಕೆ ಚಿನ್ನ ಬರಲಿ ಎಂದು ಭಾರತೀಯರು ಕಾಯುತ್ತಿದ್ದಾರೆ. ಜಾವೆಲಿನ್ ಎಸೆತದಲ್ಲಿ ನೀರಜ್ ಚೋಪ್ರಾ ಬೆಳ್ಳಿ ಗೆದ್ದಿರುವುದು ಇಲ್ಲಿಯವರೆಗಿನ ಶ್ರೇಷ್ಠ ಸಾಧನೆಯಾಗಿದೆ. ಈ ನಿಟ್ಟಿನಲ್ಲಿ ಕ್ರೀಡಾಕೂಟದ ಕೊನೆಯ ಎರಡು ದಿನಗಳಲ್ಲಿ ಚಿನ್ನದ ಪದಕ ನಿರೀಕ್ಷಿಸಲಾಗುತ್ತಿದೆ.
ಕುಸ್ತಿ ಮತ್ತು ಗಾಲ್ಫ್ ಸರ್ಧೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಕಣಕ್ಕಿಳಿಯುತ್ತಿದ್ದಾರೆ. ಭಾರತೀಯರು ಪದಕ ಗೆಲ್ಲುವಂತೆ ಹಾರೈಸುತ್ತಿದ್ದಾರೆ.
12:30 PM IST – ಗಾಲ್ಫ್ – ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ಸುತ್ತು 4 (ಅದಿತಿ ಅಶೋಕ್, ದೀಕ್ಷಾ ದಾಗರ್)
2:30 PM IST – ಕುಸ್ತಿ – ಮಹಿಳೆಯರ ಫ್ರೀಸ್ಟೈಲ್ 76kg 1/8 ಫೈನಲ್ (ರೀತಿಕಾ ಹೂಡಾ vs ನಾಗಿ ಬರ್ನಾಡೆಟ್)
4:30 PM IST – ಕುಸ್ತಿ – ಮಹಿಳೆಯರ ಫ್ರೀಸ್ಟೈಲ್ 76kg 1/4 ಫೈನಲ್ (ಅರ್ಹತೆಯ ಬಳಿಕ)
ಇಲ್ಲಿಯವರೆಗೆ ಭಾರತಕ್ಕೆ 6 ಪದಕಗಳು ಬಂದಿವೆ.
ಮನು ಭಾಕರ್: ಮಹಿಳೆಯರ 10 ಮೀ ಏರ್ ಪಿಸ್ತೂಲ್- ಕಂಚು
ಮನು ಭಾಕರ್, ಸರಬ್ಜೋತ್ ಸಿಂಗ್: 10 ಮೀ ಏರ್ ಪಿಸ್ತೂಲ್ (ಮಿಶ್ರ ತಂಡ)- ಕಂಚು
ಸ್ವಪ್ನಿಲ್ ಕುಸಾಲೆ: 50 ಮೀ ರೈಫಲ್ 3 ಸ್ಥಾನ- ಕಂಚು
ಟೀಮ್ ಇಂಡಿಯಾ: ಪುರುಷರ ಹಾಕಿ- ಕಂಚು
ನೀರಜ್ ಚೋಪ್ರಾ: ಪುರುಷರ ಜಾವೆಲಿನ್ ಥ್ರೋ- ಬೆಳ್ಳಿ
ಅಮನ್ ಸೆಹ್ರಾವತ್: ಪುರುಷರ ಕುಸ್ತಿ ಫ್ರೀಸ್ಟೈಲ್ 57 ಕೆ.ಜಿ- ಕಂಚು