ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ನೀರಜ್ ಚೋಪ್ರಾ ಚಿನ್ನಕ್ಕೆ ಗುರಿ ಇಟ್ಟಿದ್ದಾರೆ.
ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಜಾವೆಲಿನ್ ಸ್ಪರ್ಧೆಯಲ್ಲಿ ಇಂದು ತಮ್ಮ ಅಭಿಯಾನ ಆರಂಬಿಸಲಿದ್ದಾರೆ. ಅವರೊಂದಿಗೆ ಕಿಶೋರ್ ಜೆನಾ ಕೂಡ ಪಂದ್ಯಾದಲ್ಲಿ ಭಾಗವಹಿಸಲಿದ್ದಾರೆ. ಭಾರತದ ಜಾವೆಲಿನ್ ಮಾಸ್ಟರ್ ಗಳ ರಣರೋಚಕ ಪಂದ್ಯಾ ಇದಾಗಿದೆ.
2020 ರ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದು ಭಾರತದ ಕ್ರೀಡಾ ಕ್ಷೇತ್ರದ ಶ್ರೇಷ್ಠತೆಯನ್ನು ಎತ್ತಿ ಹಿಡಿದಿದ್ದ ದ ಬಂಗಾರದ ಹುಡುಗ ನೀರಜ್ ಚೋಪ್ರಾ, ಈ ಬಾರಿಯೂ ಚಿನ್ನ ಗೆಲ್ಲುತ್ತಾರೆ ಎಂಬ ಭರವಸೆ ಭಾರತದ್ದಾಗಿದೆ. ಇಂದು ಭಾರತೀಯ ಕಾಲಮಾನದಂತೆ ಸುಮಾರು 2 ಗಂಟೆಗೆ ಪುರುಷರ ಜಾವೆಲಿನ್ ಥ್ರೋ ಅರ್ಹತಾ ಗುಂಪು A ನಲ್ಲಿ ಕಿಶೋರ್ ಜೆನಾ ಭಾಗವಹಿಸಲಿದ್ದಾರೆ. 3:20ಕ್ಕೆ ನೀರಜ್ ಚೋಪ್ರಾ ಅವರು ಪುರುಷರ ಜಾವೆಲಿನ್ ಥ್ರೋ ಅರ್ಹತಾ ಗುಂಪಿನ ಬಿ ನಲ್ಲಿ ಭಾಗವಹಿಸಲಿದ್ದಾರೆ. ಈ ಬಾರಿಯೂ ನೀರಜ್ ಚೋಪ್ರಾ ಅವರೊಂದಿಗೆ ಭಾರತೀಯ ಮತ್ತೋರ್ವ ಆಟಗಾರ ಪದಕ ಗೆದ್ದ ಸಾಧನೆ ಮಾಡಲಿ ಎಂದು ಭಾರತೀಯರು ಹಾರೈಸುತ್ತಿದ್ದಾರೆ.