ತಂದೆಯ ಗನ್ ನೊಂದಿಗೆ ಆಟವಾಡುತ್ತ ಮೂರು ವರ್ಷದ ಬಾಲಕ ಶೂಟ್ ಮಾಡಿಕೊಂಡು ಸಾವನ್ನಪ್ಪಿರುವ ಘಟನೆ ನಡೆದಿದೆ.
ಅಮೆರಿಕದ ಲೂಸಿಯಾನದಲ್ಲಿ ಈ ಘಟನೆ ನಡೆದಿದೆ. ಬಾಲಕ ಗನ್ ನೊಂದಿಗೆ ಆಡುತ್ತ ತನ್ನ ಮುಖದ ಮುಂದೆ ಹಿಡಿದುಕೊಂಡು ಟ್ರಿಗರ್ ಒತ್ತಿದ್ದಾನೆ. ಇದರಿಂದ ಆ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ತನ್ನ ಬೆಡ್ ರೂಂನಲ್ಲಿ ಇಟ್ಟಿದ್ದ ತನ್ನ ತಂದೆಯ ಗನ್ ಅನ್ನು ತೆಗೆದುಕೊಂಡ ಬಾಲಕ ಅದರೊಂದಿಗೆ ಆಟವಾಡುತ್ತಿದ್ದ. ಅದು ಯಾರ ಗಮನಕ್ಕೂ ಬಂದಿರಲಿಲ್ಲ. ಈ ಸಂದರ್ಭದಲ್ಲಿ ತನ್ನ ಮುಖದ ಮುಂದೆ ಗನ್ ಹಿಡಿದುಕೊಂಡು ಟ್ರಿಗರ್ ಒತ್ತಿದ್ದಾನೆ. ಇದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.
ಶಬ್ದ ಕೇಳಿ ಓಡಿಬಂದ ಆತನ ತಂದೆ ಅವನನ್ನು ಬದುಕಿಸಲು ಸಾಕಷ್ಟು ಯತ್ನಿಸಿದರೂ ಫಲ ನೀಡಿಲ್ಲ. ತಂದೆ ಬಂದೂಕನ್ನು ಸುರಕ್ಷತೆಯ ದೃಷ್ಟಿಯಿಂದ ಇಟ್ಟುಕೊಂಡಿದ್ದರೂ ಅದನ್ನು ಸರಿಯಾಗಿ ಭದ್ರಪಡಿಸದಿರುವುದು ಮಗನ ಸಾವಿಗೆ ಕಾರಣವಾಗಿದೆ.