ಚಿತ್ರದುರ್ಗ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಂದು ಕೂಡ ಇಬ್ಬರನ್ನು ಬಂಧಿಸಿದ್ದಾರೆ.
ಆದರೆ, ಮಗ ಅರೆಸ್ಟ್ ಆಗಿದ್ದನ್ನು ಕಂಡ ಅನುಕುಮಾರ್ ತಂದೆ ಚಂದ್ರಣ್ಣ (60) ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. A6, A7 ಆರೋಪಿಗಳನ್ನು ಚಿತ್ರದುರ್ಗ ಡಿವೈಎಸ್ಪಿ (Chitradurga DYSP), ಕಾಮಾಕ್ಷಿಪಾಳ್ಯ ಪೊಲೀಸರ ನೇತೃತ್ವದಲ್ಲಿ ಇಂದು ಬಂಧಿಸಲಾಗಿದೆ. A7 ಆರೋಪಿ ಬಂಧನದ ಬೆನ್ನಲ್ಲೇ ಆತನ ತಂದೆ ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾರೆ.
ಮಗ ಅರೆಸ್ಟ್ ಆಗಿದ್ದಕ್ಕೆ ಮನನವೊಂದು ಚಿತ್ರದುರ್ಗ ನಗರದಲ್ಲಿನ ಸಿಹಿ ನೀರು ಹೊಂಡ ಬಳಿಯ ಮನೆಯಲ್ಲಿಯೇ ತಂದೆ ಸಾವನ್ನಪ್ಪಿದ್ದಾರೆ. ತಂದೆ ಸಾವನ್ನಪ್ಪಿದ್ದಕ್ಕೆ ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರದುರ್ಗ ಡಿವೈಎಸ್ಪಿ ದಿನಕರ್, ಕಾಮಾಕ್ಷಿಪಾಳ್ಯ ಇನ್ಸ್ ಪೆಕ್ಟರ್ ಸಂಜಯ್ ಗೌಡ್ ನೇತೃತ್ವದಲ್ಲಿ ಎ6 ಆರೋಪಿ (Accused) ಜಗ್ಗ ಅಲಿಯಾಸ್ ಜಗಧೀಶ್, ಎ7 ಆರೋಪಿ ಅನಿ ಅಲಿಯಾಸ್ ಅನುಕುಮಾರ್ ಇಬ್ಬರನ್ನೂ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.