ಬೆಂಗಳೂರು: ಬೇಡಿಕೆ ಮತ್ತು ಪೂರೈಕೆಗೆ ಅನುಗುಣವಾಗಿ ವಿದ್ಯುತ್ ಶುಲ್ಕ ವಿಧಿಸಲು ಕೇಂದ್ರ ವಿದ್ಯುತ್ ಸಚಿವಾಲಯವು ‘ಟೈಮ್ ಆಫ್ ದಿ ಡೇ’ ದರ ನಿಗದಿ ನಿಯಮಾವಳಿಯನ್ನು ಜಾರಿಗೆ ತರಲು ಮುಂದಾಗಿದೆ. ಗ್ರಾಹಕರು ದಿನದ ಯಾವ ಅವಧಿಯಲ್ಲಿ ವಿದ್ಯುತ್ ಬಳಸುತ್ತಾರೆ ಎನ್ನುವ ಆಧಾರದ ಮೇಲೆ ಶುಲ್ಕದಲ್ಲಿ ವ್ಯತ್ಯಾಸವಾಗಲಿದೆ. ಹೊಸ ನಿಯಮದ ಪ್ರಕಾರ ದಿನದಲ್ಲಿ ಬೇರೆ ಬೇರೆ ಸ್ಲಾಟ್ಗಳನ್ನು ನಿಗದಿಪಡಿಸಿ, ಆಯಾ ಅವಧಿಗೆ ತಕ್ಕಂತೆ ದರ ನಿಗದಿ ಮಾಡಲಾಗುತ್ತದೆ.
ಹೆಚ್ಚಿನ ಬೇಡಿಕೆಯ ಅವಧಿಯಲ್ಲಿ ಬಳಸುವ ವಿದ್ಯುತ್ಗೆ ಹೆಚ್ಚು ಶುಲ್ಕ ಹಾಗೂ ಕಡಿಮೆ ಬೇಡಿಕೆಯ ಅವಧಿಯಲ್ಲಿ ಬಳಸುವ ವಿದ್ಯುತ್ಗೆ ಕಡಿಮೆ ಶುಲ್ಕ ವಿಧಿಸಲಾಗುತ್ತದೆ. ಈ ಕಾರಣದಿಂದ ಹಗಲು ಮತ್ತು ರಾತ್ರಿ ವೇಳೆ ಬಳಸುವ ವಿದ್ಯುತ್ ಶುಲ್ಕದಲ್ಲಿ ವ್ಯತ್ಯಾಸವಿರಲಿದೆ. ಈ ಕುರಿತ ಕರಡು ನಿಯಮಾವಳಿ ಈಗಾಗಲೇ ಸಿದ್ಧವಾಗಿದ್ದು, 2027ರ ಏಪ್ರಿಲ್ ಒಂದರಿಂದ ಅನುಷ್ಠಾನಕ್ಕೆ ಬರಲಿದೆ. 2029ರ ಏಪ್ರಿಲ್ನಿಂದ ಬಹುತೇಕ ಎಲ್ಲಾ ಗ್ರಾಹಕರನ್ನು ಈ ನಿಯಮದಡಿ ತರುವ ಗುರಿ ಹೊಂದಲಾಗಿದೆ.


















