ಬೆಂಗಳೂರು: ಕರ್ನಾಟಕ ಸರ್ಕಾರದ ಅಧೀನದಲ್ಲಿ ಕಾರ್ಯನಿರ್ವಹಿಸುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಲ್ಲಿಖಾಲಿ ಇರುವ 25 ಹುದ್ದೆಗಳ ನೇಮಕಾತಿಗಾಗಿ (Suvarna Arogya Suraksha Trust Recruitment 2026) ಅಧಿಸೂಚನೆ ಹೊರಡಿಸಲಾಗಿದೆ. ಸೀನಿಯರ್ ಎಕ್ಸಿಕ್ಯೂಟಿವ್ ಡಾಕ್ಟರ್ಸ್ ಸೇರಿ ಹಲವು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ನೇರ ಸಂದರ್ಶನದ ಮೂಲಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ – ಮುಖ್ಯಮಂತ್ರಿಗಳ ಆರೋಗ್ಯ ಕರ್ನಾಟಕ (AB PMJAY – CM’s ArK) ಹಾಗೂ ಇತರೆ ಆರೋಗ್ಯ ಯೋಜನೆಗಳ ಅನುಷ್ಠಾನಕ್ಕಾಗಿ ನೇಮಕಾತಿ ನಡೆಯುತ್ತಿದೆ.
ಹುದ್ದೆಗಳ ವಿವರ
ನೇಮಕಾತಿ ಸಂಸ್ಥೆ: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್
ಹುದ್ದೆಗಳ ಹೆಸರು: ಸೀನಿಯರ್ ಎಕ್ಸಿಕ್ಯೂಟಿವ್ ಡಾಕ್ಟರ್ಸ್ ಇತ್ಯಾದಿ
ಒಟ್ಟು ಹುದ್ದೆಗಳು: 25
ಉದ್ಯೋಗ ಸ್ಥಳ: ಬೆಂಗಳೂರು ಸೇರಿ ಕರ್ನಾಟಕದ ಹಲವೆಡೆ
ನೇಮಕಾತಿ ವಿಧಾನ: ಸಂದರ್ಶನ
ಸಂದರ್ಶನದ ದಿನಾಂಕ: ನವೆಂಬರ್ 30
ಡಾಕ್ಟರ್ ಇನ್-ಆಫೀಸ್ ಕ್ವಾಲಿಟಿ ಸೆಲ್, ಸೀನಿಯರ್ ಎಕ್ಸಿಕ್ಯೂಟಿವ್ ಡಾಕ್ಟರ್ಸ್, ಎಕ್ಸಿಕ್ಯೂಟಿವ್ ಡಾಕ್ಟರ್ 2ಎ ಕ್ಲೇಮ್ಸ್, ರೀಜನಲ್ ಕನ್ಸಲ್ಟೆಂಟ್, ಡಿಸ್ಟ್ರಿಕ್ಟ್ ಕೋಆರ್ಡಿನೇಟರ್, ಎಕ್ಸಿಕ್ಯೂಟಿವ್ ಡಾಕ್ಟರ್ ಸೇರಿ ಹಲವು ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ಆಯಾ ಹುದ್ದೆಗಳಿಗೆ ಅನುಗುಣವಾಗಿ ಎಂಬಿಬಿಎಸ್ ಸೇರಿ ವಿವಿಧ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ನೇಮಕಾತಿ ಹೊಂದಿದವರಿಗೆ ಆಯಾ ಹುದ್ದೆಗಳ ಅನ್ವಯ ಮಾಸಿಕ 1 ಲಕ್ಷ ರೂಪಾಯಿವರೆಗೆ ಸಂಬಳ ನೀಡಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ http://sast.karnataka.gov.in/ ಗೆ ಭೇಟಿ ನೀಡಬಹುದು.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಕರ್ನಾಟಕ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕೆಲಸ ಮಾಡುವ ಟ್ರಸ್ಟ್ ಆಗಿದೆ. ಇದು ನೇರವಾಗಿ ಆಸ್ಪತ್ರೆ ನಡೆಸುವ ಸಂಸ್ಥೆಯಲ್ಲ. ಬದಲಿಗೆ, ರಾಜ್ಯದ ಜನರಿಗೆ ಸರ್ಕಾರಿ ಹಣದಿಂದ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗುವಂತೆ ಮಾಡುವ ವ್ಯವಸ್ಥೆಯನ್ನು ನಿರ್ವಹಿಸುತ್ತದೆ.
ಸರ್ವರಿಗೂ ಗುಣಮಟ್ಟದ ಮತ್ತು ಕೈಗೆಟುಕುವ ಆರೋಗ್ಯ ಸೇವೆಗಳನ್ನು ಒದಗಿಸುವುದು ಸಂಸ್ಥೆಯ ಉದ್ದೇಶವಾಗಿದೆ. ರೋಗ ತಡೆಯುವಿಕೆ, ರೋಗ ಪರಿಹರಿಸುವಿಕೆ ಮತ್ತು ಆರೋಗ್ಯ ಆರೈಕೆ ಮರುಸ್ಥಾಪಿಸುವಿಕೆಯ ಸಮಗ್ರ ಆರೋಗ್ಯ ಪಾಲನಾ ದೃಷ್ಟಿಕೋನದೊಂದಿಗೆ ರಾಜ್ಯದ ಎಲ್ಲಾ ಜನರ ಆರೋಗ್ಯ ಮತ್ತು ಯೋಗಕ್ಷೇಮವನ್ನು ಸಾಧ್ಯವಾದಷ್ಟು ಅತ್ಯುನ್ನತ ಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶಗಳನ್ನು ಹೊಂದಿದೆ.
ಸಂದರ್ಶನ ನಡೆಯುವ ಸ್ಥಳ
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್, ಆರೋಗ್ಯ ಸೌಧ, 7ನೇ ಮಹಡಿ, ಮಾಗಡಿ ರಸ್ತೆ, ಬೆಂಗಳೂರು – 560023.
ಬೆಳಗ್ಗೆ 10:30 ರಿಂದ ಮಧ್ಯಾಹ್ನ 12:30ರವರೆಗೆ ನೋಂದಣಿ, ಬೆಳಗ್ಗೆ 10:45 ರಿಂದ ಮಧ್ಯಾಹ್ನ 01:30ರವರೆಗೆ ಕಂಪ್ಯೂಟರ್ ಪರೀಕ್ಷೆಯು ಹಾಗೂ ಮಧ್ಯಾಹ್ನ 02:30 ರಿಂದ ಸಂಜೆ 05:30ರವರೆಗೆ ಸಂದರ್ಶನ ನಡೆಯಲಿದೆ. ಹೆಚ್ಚಿನ ಮಾಹಿತಿಗೆ 080-222536200 ಗೆ ಸಂಪರ್ಕಿಸಿ.



















